ಸೋಷಿಯಲ್ ಮೀಡಿಯಾದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಫೋಟೋ ಬಳಸಿಕೊಂಡು ಅಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಯುವಕನನ್ನು ಪತ್ತೆ ಹಚ್ಚುವಲ್ಲಿ ನವನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು, ಕಳೆದ ಅಕ್ಟೋಬರ್ 13ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಫೋಟೋ ಬಳಸಿ ‘ಪ್ರಜ್ವಲ್ ಗೌಡ ಪಾಟೀಲ್’ ಎಂಬ ಐಡಿಯಿಂದ ಅಕ್ಷೇಪಾರ್ಹ ಪೋಸ್ಟ್ ಹಂಚಿಕೊಳ್ಳಲಾಗಿತ್ತು. ಈ ಕುರಿತು ಬಿಜೆಪಿ ಮುಖಂಡ ಮಂಜುನಾಥ್ ಹೆಬಸೂರ್ ಅವರು ಪ್ರಜ್ವಲ್ ಗೌಡ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ನವನಗರ ಠಾಣೆಯ ಪೊಲೀಸರು, ತಕ್ಷಣವೇ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡ ಯುವಕ, “ಇನ್ನೊಮ್ಮೆ ಈ ರೀತಿ ವಿವಾದಾತ್ಮಕ ಪೋಸ್ಟ್ ಮಾಡುವುದಿಲ್ಲ” ಎಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಯಾರಿಗೂ ಹೆದರದೆ ಬೇಕಾಬಿಟ್ಟಿ ಪೋಸ್ಟ್ ಹಂಚಿಕೊಳ್ಳುವವರಿಗೆ ಈ ಘಟನೆ ಒಂದು ರೀತಿಯ ಎಚ್ಚರಿಕೆಯಾಗಿದೆ.
