ಕಬ್ಬು ಬೆಳೆಗಾರರು ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಧಾರವಾಡ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ. ಎರಡು ದಿನಗಳಿಂದ ಲಾರಿಗಳು ಹಾಗೂ ಚಾಲಕರು ರಸ್ತೆಯಲ್ಲಿ ನಿಂತಿದ್ದು, ಚಾಲಕರಿ ಹಾಗೂ ಕ್ಲೀನರ್ಗಳಿಗೆ ಮಹಿಳಾ ಇನ್ಸ್ಪೆಕ್ಟರ್ ಊಟ ನೀರು ನೀಡುವ ಮೂಲಕ ಮಾನವೀಯತೆ ಮೇರೆದಿದ್ದಾರೆ.

ಧಾರವಾಡ ಯರಿಕೊಪ್ಪ ಬಳಿ ಕಬ್ಬು ಬೆಒಲಗಾರರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದು, ಇದರಿಂದಾಗಿ ವಿವಿಧ ರಾಜ್ಯಗಳಿಂದ ಬಂದ್ ಲಾರಿಗಳು ಎರಡು ದಿನದಿಂದ ರಸ್ತೆಯಲ್ಲಿ ನಿಂತಿವೆ. ಲಾರಿ ಚಾಲಕರ ಗೋಳು ಕೇಳುವವರೆ ಇಲ್ಲದಂತ ಸಮಯದಲ್ಲಿ, ಧಾರವಾಡ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ರೇಣುಕಾ ಅವರು ಲಾರಿ ಚಾಕರಿಗೆ ಕುಡಿಯಲು ನೀರು ಹಾಗೂ ಊಟವನ್ನು ನೀಡುವ ಮೂಲಕ ಮಾದರಿಯ ಕಾರ್ಯ ಮಾಡುವುದರ ಇತರೆ ಸಂಘ ಸಂಸ್ಥೆ ಪ್ರೇರಣಯಾಗಿದ್ದಾರೆ.
