ಶಾರ್ಟ್ ಸರ್ಕ್ಯೂಟನಿಂದಾಗಿ ಸ್ಟೀಲ್ ಅಂಗಡಿಯೊಂದಕ್ಕೆ ಭಾನುವಾರ ತಡರಾತ್ರಿ ಬೆಂಕಿ ಬಿದ್ದು ಹೊತ್ತಿ ಉರಿದಿತಮರುವ ಘಟನೆ ನಡೆದು ಲಕ್ಷಾಂತರ ರೂಪಾಯಿ ಬೆಲೆ ಬಾಳು ಸಾಮಗ್ರಿ ಸೇರಿ ನಗದು ಪೆಟ್ಡಿಗೆಯಲ್ಲಿದ್ದ ಹಣಕ್ಕೂ ಹಾನಿಯಾಗಿರುವ ಘಡನೆ ಧಾರವಾಡ ಸವದತ್ತಿ ರಸ್ತೆಯಲ್ಲಿ ನಡೆದಿದೆ.

ಧಾರವಾಡದ ಸವದತ್ತಿ ರಸ್ತೆಯಲ್ಲಿನ ಲಕ್ಷ್ಮೀ ಸ್ಟೀಲ್ ಟ್ರೇಡರ್ಸ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ. ಅಂಗಡಿಯ ಮಾಲೀಕರು ಭಾನುವಾರ ರಾತ್ರಿ ಕೆಲಸ ಮುಗಿಸಿ, ಹಣವನ್ನು ಅಂಗಡಿಯಲ್ಲೇ ಇಟ್ಟು ಬೀಗ ಹಾಕಿಕೊಂಡು ಮನೆಗೆ ತೆರಳಿದ್ದರು. ಈ ವೇಳೆ ಅಂಗಡಿಯೊಳಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ಅಂಗಡಿಯಲ್ಲಿದ್ದ ವಿವಿಧ ಸಾಮಗ್ರಿಗಳು ಹಾಗೂ ಹಣ ಸುಟ್ಟು ಭಸ್ಮವಾಗಿದ್ದು, ಅಗ್ನಿ ಶಾಮಕದಳದ ಸಿಬ್ಬಂದಿಯ ಕಾರ್ಯಾಚರಣೆಯಿಂದ ಅಲ್ಪಸ್ವಲ್ಪ ನಗದು ಹಣ ಉಳಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿನಂದಿಸಲು ಹರಸಾಹಸ ಪಟ್ಟಿದ್ದಾರೆ. ಈ ಘಟನೆ ಧಾರವಾಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
