ಕುಂದರನಾಡಿನ ಅಕ್ಕತಂಗೇರಹಾಳ, ಉರಬಿನಹಟ್ಟಿ, ಅಂಕಲಗಿ, ಮದವಾಲ, ಮಲ್ಲಾಪುರ, ಬಸ್ಸಾಪೂರ, ಮುಂತಾದ ಸದ್ಭಕ್ತರಿಂದ ರವಿವಾರ.ಪರಿಸರ ಶುಚಿತ್ವಕ್ಕೆ ಬೆಳಗಾವಿಯಿಂದ ಅಕ್ಕತಂಗೇರಹಾಳ ಶ್ರೀ ದುರ್ಗಾ ದೇವಸ್ಥಾನದವರೆಗೆ ಬ್ರಹತ್ ಪಾದಯಾತ್ರೆ ಜರುಗಿತು.
ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠಕ್ಕೆ ಆಗಮಿಸುತ್ತಿದ್ದಂತೆ ಅಕ್ಕತಂಗೇರಹಾಳ ಸದ್ಭಕ್ತರು ಜೈಕಾರ ಹಾಕಿ ಭವ್ಯ ಸ್ವಾಗತ ಕೋರಿದರು. ರಾಮತೀರ್ಥನಗರ ದಲ್ಲಿ ಜರುಗಿದ ಈ ಪಾದಯಾತ್ರೆಯ ಉದ್ಘಾಟನೆಯನ್ನು ಬೆಳಗಾವಿ ಉಪ ಮಹಾಪೌರ ಹನುಮಂತ ಕೊಂಗಾಲಿ ದುರ್ಗಾ ಪೂಜೆ ಸಲ್ಲಿಸಿ, ಚಾಲನೆ ನೀಡಿ ಮಾತನಾಡಿ, ಪರಿಸರದ ಶುಚಿತ್ವಕ್ಕೆ ದುರ್ಗಾ ಸದ್ಭಕ್ತರಿಂದ ಆಯೋಜಿಸಿದ ಈ ದಸರಾ ಹಬ್ಬದಲ್ಲಿಯ ಈ ಪಾದಯಾತ್ರೆಯು ಸರ್ವರಿಗೂ ಒಳಿತನ್ನುಂಟು ಮಾಡಲಿ.. ಎಂದು ಶುಭ ಹಾರೈಸಿದರು.
ಅತಿಥಿಯಾಗಿದ್ದ ನಿವ್ರತ್ತ ಶಿಕ್ಷಣಾಧಿಕಾರಿ ರೌದ್ರಗೌಡ ಜುಟ್ಟನವರ ಮಾತನಾಡಿ ಕುಂದರನಾಡು ಕವಿ, ಸಾಹಿತಿಗಳ, ತಪೋನಿಧಿಗಳ ಸಂಪದ್ಭರಿತ ನಾಡು. ನಾಡಿನ ಕಲೆ,ಸಾಹಿತ್ಯ ,ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾಗಿರುವ ನಾಡು. ೧೨ ಶತಮಾನದ ಗಟ್ಟಿ ತಪೋನಿಧಿ ಅಂಕಲಗಿ ಅಡವಿ ಮಹಾಸ್ವಾಮಿಗಳ ಧಾರ್ಮಿಕ ಕೊಡುಗೆ ಅದ್ವಿತೀಯವಾಗಿದೆ ಎಂದರಲ್ಲದೆ, ಈ ಪರಿಸರ ಶುಚಿತ್ವಕ್ಕೆ ನಾಗರೀಕ ಪ್ರಜ್ಞೆ ಮೂಡಿಸಲು ದಿಟ್ಟ ಹೆಜ್ಜೆ ಇಟ್ಟ ಈ ಪರಿಸರವಾದಿಗಳ ಕಾರ್ಯ ನಿಜಕ್ಕೂ ಶ್ಲ್ಯಾಘನೀಯ ಎಂದರು. ಅಕ್ಕತಂಗೇರಹಾಳ ದುರ್ಗಾ ದೇವಸ್ಥಾನದ ಅದ್ಯಕ್ಷ ವೀರನಗೌಡಾ ಈಶ್ವರಪ್ಪಗೋಳ, ಸರ್ವರನ್ನು ಸ್ವಾಗತಿಸಿದರು. ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅದ್ಯಕ್ಷ ಸುರೇಶ ಉರಬಿನಹಟ್ಟಿ ಪ್ರಸ್ತಾವಿಕ. ಪಾದಯಾತ್ರೆಯ ಉದ್ದೇಶ ಕುರಿತು ಮಾತನಾಡಿದರು. ಹಿರಿಯರಾದ ಮದನಕುಮಾರ ಭೈರಪ್ಪನವರ, ಜಿ ಎಸ್ ಪಾಟೀಲ, ಎಸ್ ಜಿ ಕಲ್ಯಾಣಿ , ಎಸ್ ಪಿ ತೇರಣಿ, ಜಿ ಎಸ್ ಪಾಟೀಲ, ರಾಜೇಂದ್ರ ರತನ್, ಈರಯ್ಯಾ ಖೋತ, ವಿಲಾಸ ಕೆರೂರ, ಎನ್ ಬಿ ನಿರ್ವಾಣಿ, ಜಿ ಆರ್ ಹಿರೇಮಠ,
ಮಹೇಶ ಮಾವಿನಕಟ್ಟಿ, ಎಸ್ ಎಲ್ ಸನದಿ, ಬಸವರಾಜ ಹಿರೇಮಠ, ಮಂಜುನಾಥ ಪಾಟೀಲ, ಶಿವಾನಂದ ಮಠಪತಿ, ಪ್ರಕಾಶ ದಿಕ್ಷಿತ್, ಎನ್ ಬಿ ಹನ್ನಿಕೇರಿ, ಅಶೋಕ ಕರಲಿಂಗನ್ನವರ, ಚಂದ್ರಶೇಖರ ಭಡಕಲ್, ಬಸವರಾಜ್ ವಾಲಿ, ಬಸವರಾಜ ತರಬರ, ಭೋಸ ಕಟ್ಟೆನ್ನವರ, ಆನಂದ ಪಾಟೀಲ, ಬಾಳಪ್ಪ ಸಂಸುದ್ದಿ , ಪ್ರಹ್ಲಾದ ಹೊಳೆಯಾ ಚಿ, ಸಿದ್ದಣ್ಣಾ ಹೆಬ್ಬಾಳ, ರುದ್ರಣ್ಣಾ ಬಸ್ಸಾಪೂರ ಮಹೇಶ ಕರಲಿಂಗನ್ನವರ, ಶೇಖರ ಮಾಸ್ತಿ, ಓಂಪ್ರಕಾಶ್ ನಿರ್ವಾಣಿ, ಸುರೇಶ ಮುಳಕೂರಿ, ಐ ಬಿ ನಿರ್ವಾಣಿ, ಚನಬಸಯ್ಯಾ ಮಠಪತಿ , ರಮೇಶ ಪಾಟೀಲ, ಬಸವರಾಜ ಹೊಳೆಯಾಚಿ, ರಾಜು ಪಂಗನ್ನವರ, ಗಜಾನನ ಬಡಿಗೇರ, ಪ್ರಕಾಶ ಮಾವಿನಕಟ್ಟಿ, ಸೇರಿದಂತೆ ಅಕ್ಕತಂಗೇರಹಾಳ ದ ದುರ್ಗಾ ಕಮಿಟಿ ಸದಸ್ಯರು, ಸದ್ಭಕ್ತರು ಉಪಸ್ತಿತರಿದ್ದರು.. ಚನಬಸಯ್ಯಾ ಮಠಪತಿ , ಪ್ರಹ್ಲಾದ ಹೊಳೆಯಾಚಿ, ಬಸಯ್ಯ ಮಠಪತಿ ಉಪಹಾರ, ವಾಹನ ಸೇರಿದಂತೆ ಚಹಾದ ವ್ಯವಸ್ಥೆ ಮಾಡಿದ್ದರು. ಪ್ರೊ ಎ ಕೆ ಪಾಟೀಲ ನಿರೂಪಿಸಿದರಲ್ಲದೆ, ವಂದಿಸಿದರು..
