bagalkot

ದೇವಸ್ಥಾನದ ಯುವಕರ ಹುಚ್ಚಾಟ ಪ್ರಶ್ನಿಸಿದ ಯುವಕನ ಬರ್ಬರ ಕೊಲೆ!!!

Share

ದೇವಸ್ಥಾನದ ಬಳಿ ಯುವಕರ ಹುಚ್ಚಾಟವನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಆರೋಪಿಗಳ ಗುಂಪು ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಿ, ತಡೆಯಲು ಬಂದ ಮೃತನ ಚಿಕ್ಕಪ್ಪನಿಗೂ ಮೇಲೂ ಹಲ್ಲೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ.

ಮುಧೋಳ ನಗರದ ವಿನಾಯಕ ನಗರದ ದುರ್ಗಾದೇವಿ ದೇವಸ್ಥಾನದ ಬಳಿ ನಿನ್ನೆ ರಾತ್ರಿ 10:30ರ ಸುಮಾರಿಗೆ ನವರಾತ್ರಿ ದಂಡೆ ಆಚರಣೆ ಮುಗಿಸಿ ಬರುವಾಗ ಈ ದಾರುಣ ಘಟನೆ ಸಂಭವಿಸಿದೆ. ನಿತಿನ್ ಸಂತೋಷ್ ನಿಂಬಾಳ್ಕರ್ (22) ಕೊಲೆಯಾದ ದುರ್ದೈವಿ ಯುವಕ. ಮೃತ ನಿತಿನ್ ಹಾಗೂ ಅವರ ಚಿಕ್ಕಪ್ಪ ಸಂಜು ಶಿವಾಜಿ ನಿಂಬಾಳ್ಕರ್ (40) ಮೇಲೆ ಆರೋಪಿಗಳಾದ ಶ್ರೀನಿವಾಸ್ ನಾಗಪ್ಪ ಕೊರವರ, ಪ್ರದೀಪ್ ಶಿವಾನಂದ ಕಳ್ಳಿಮಠ, ಸಂಪತ್ ಗಂಗಪ್ಪ ಕೊರವರ, ಸದಾ ದೇಸಾಯಿ, ಲೋಕೇಶ ಮಲ್ಲಪ್ಪ ಶಿರಗಾರ ಮತ್ತು ಬಸವರಾಜ ಈರಪ್ಪ ತೋಳಮಟ್ಟಿ ಎಂಬುವರ ಆರು ಜನರ ಗುಂಪು ದಾಳಿ ನಡೆಸಿದೆ.

ದೇವಸ್ಥಾನದ ಬಳಿ ಆರೋಪಿಗಳು ಹುಚ್ಚಾಟ ಮೆರೆದು ಕೂಗಾಡುತ್ತಿದ್ದುದನ್ನು ಯುವಕ ಸಂಜು ಪ್ರಶ್ನಿಸಿದ್ದರು. ಇದೇ ಕೋಪದಿಂದ ಉಳಿದ ಆರೋಪಿಗಳನ್ನು ಕರೆಸಿಕೊಂಡ ಶ್ರೀನಿವಾಸ್ ಹಾಗೂ ಪ್ರದೀಪ್, ಜಗಳವಾಡಿ ತಮ್ಮ ಬಳಿ ಇದ್ದ ಚಾಕುವಿನಿಂದ ನಿತಿನ್ ಅವರ ಎದೆ ಮತ್ತು ಹೊಟ್ಟೆಗೆ ಮನಸೋಇಚ್ಛೆ ಇರಿದಿದ್ದಾರೆ. ಅಡ್ಡಬಂದ ನಿತಿನ್ ಚಿಕ್ಕಪ್ಪ ಸಂಜು ಮೇಲೂ ಚಾಕುವಿನಿಂದ ಹಲ್ಲೆ ನಡೆಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Tags:

error: Content is protected !!