ಆ ಚಿಕ್ಕ ಗ್ರಾಮದಲ್ಲಿ ಜನಮಾನಸಗೊಂಡ ಜಾಗೃತ ದೈವ.ಆ ಪವಾಡ ಪುರುಷನ 13ನೇ ಜಾತ್ರಾಮಹೋತ್ಸವ ಸಂಭ್ರಮ ಸಡಗರದಿಂದ ಜರುಗಿತು.ದೈವಿ ಪುರುಷನ ದರ್ಶನಕ್ಕೆ ರಾಜ್ಯ ಹೊರರಾಜ್ಯದಿಂದ ಭಕ್ತರು ಆಗಮಿಸಿ ಸಿದ್ದಿ ಪುರುಷನ ಗದ್ದುಗೆ ದರ್ಶನ ಪಡೆದು ಪುನಿತರಾದ್ರು.ಪವಾಡ ಪುರುಷ ದತ್ತಗುರು ಸದಾನಂದ್ ಬಾಬಾರ ಜಾತ್ರೆ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪವಾಡ ಪುರುಷನಿಗೆ ನೆರವೇರಿದ ವಿಶೇಷ ಪೂಜಾ ಕೈಂಕರ್ಯಗಳು. ಸಿದ್ದಿಪುರುಷನ ಗದ್ದುಗೆ ದರ್ಶನ ಪಡೆಯುತ್ತಿರೋ ಭಕ್ತರು.ಬೇಡಿಕೊಂಡ ಹರಿಕೆ ಫಲಿಸಿದ ಬಳಿಕ ದತ್ತಗುರು ಸದಾನಂದ ಬಾಬಾರ ಜಾತ್ರೆಗೆ ಹರಿದು ಬಂದ ಭಕ್ತ ಸಮೂಹ. ಅಂದ್ಹಾಗೆ ಇಂತಹ ಭಕ್ತಿ ಭಾವೈಕ್ಯತೆ ದೃಶ್ಯಗಳು ಕಂಡುಬಂದಿದ್ದು, ಯಾದಗಿರಿ ಜಿಲ್ಲೆ ಸುರಪೂರ ತಾಲ್ಲೂಕಿನ ಪರಸನಹಳ್ಳಿಯ ಆರಾದ್ಯ ದೈವ ದತ್ತ ಗುರುಸದಾನಂದ ಬಾಬಾರ 13ನೇ ಜಾತ್ರಾಮಹೋತ್ಸವದಲ್ಲಿ. ಹೌದು ಸದಾ ಜಾಗೃತ ದೈವವೆಂದೇ ಭಕ್ತರಿಂದ ಆರಾಧಿಸಲ್ಪಡುವ ಶ್ರೀ ದತ್ತಗುರು ಸದಾನಂದ ಬಾಬಾರವರ 13 ನೇ ಜಾತ್ರಾ ಮಹೋತ್ಸವ ಭಕ್ತಿ ಭಾವದಿಂದ ಹಾಗೂ ಅದ್ಧೂರಿಯಾಗಿ ನೆರವೇರಿತು.ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ದೇಶ-ವಿದೇಶಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಬಾಬಾರವರ ದರ್ಶನ ಪಡೆದು ಆಶೀರ್ವಾದ ಪಡೆದು ಪುನೀತರಾಗಿದ್ರು..ಈ ಚಿಕ್ಕ ಗ್ರಾಮದಲ್ಲಿ ನೆಲೆಸಿರುವ ಸದಾನಂದ ಬಾಬಾ ತಮ್ಮ ಪವಾಡಗಳಿಂದ ಜನಜನಿತರಾಗಿದ್ದಾರೆ. ವಿಶೇಷ ಅಂದ್ರೆ ಸದಾನಂದ ಬಾಬಾರ ಪರಮ ಭಕ್ತರಾದ ನಿವೃತ್ತ ಐಎಎಸ್ ಅಧಿಕಾರಿ ವಿ.ಶಂಕರ್ ಅವ್ರು ಪವಾಡ ಪುರುಷನ ವಿಶೇಷ ಪೂಜಾ ಕೈಂಕರ್ಯಗಳನ್ನ ಭಾಗವಹಿಸಿ, ಬಾಬಾರ ಆಶೀರ್ವಾದ ಪಡೆದ್ರು. ತಮ್ಮ ಕುಟುಂಬದೊಂದಿಗೆ ಆಗಮಿಸಿದ ನಿವೃತ್ತ ಐಎಎಸ್ ಅಧಿಕಾರಿ ಪೂಜೆಯಲ್ಲಿ ಪಾಲ್ಗೊಂಡ್ರು. ಶಂಕರ್ ಅವ್ರು ತಾವು ಈ ಹಿಂದೆ ಈ ಸ್ಥಳದಲ್ಲಿ ಹೊತ್ತ ಆ ಒಂದು ಹರಿಕೆ ಫಲಿಸಿತ್ತು. ಅದು ಆಂತಿಂತ ಹರಕೆ ಆಗಿರಲಿಲ್ಲ.. ಐಎಎಸ್ ಮುಗಿಸಿ, ಡಿಸಿ ಆಗುವ ಹರಕೆಯಾಗಿತ್ತು,ಅವ್ರು ಡಿಸಿ ಕನಸು ಬಾಬಾನ ಆಶೀರ್ವಾದದಿಂದ ಇಡೇರಿತ್ತು. ಹೀಗಾಗಿ ಪವಾಡ ಪುರುಷ ಸದಾನಂದ ಬಾಬಾರ ಮೇಲಿನ ಭಕ್ತಿ ಮತ್ತಷ್ಟು ಇಮ್ಮಡಿಗೊಳಿಸಿತ್ತು, ಹೀಗಾಗಿ ವಿ.ಶಂಕರ್ ಅವ್ರು ತಪ್ಪದೇ ಪ್ರತಿ ವರ್ಷ ಜಾತ್ರೆಗೆ ಆಗಮಿಸಿ ಸದಾನಂದ ಬಾಬಾರ ದರ್ಶನ ಪಡೆದು ಪುನಿತರಾಗ್ತಾರೆ.

ಇನ್ನು ಬಾಲ್ಯದಲ್ಲಿ ಬಾಬಾನ ಪವಾಡಸದಾನಂದ ಬಾಬಾ ಅವರು ಬಾಲ್ಯದಲ್ಲಿ ಅನೇಕ ಪವಾಡ ಮಾಡಿದ್ದಾರೆ.ಒಮ್ಮೆ ತೊಟ್ಟಿಲಲ್ಲಿ ಝಗಮಗಿಸುವ ಬೆಳಕಿನಂತೆ ಕಂಡರೆ, ಮತ್ತೊಮ್ಮೆ ಸರ್ಪರೂಪದಲ್ಲಿ ದರ್ಶನ ನೀಡಿದ್ದಾರೆ.ಬೆಳೆದು ದೊಡ್ಡವರಾದಂತೆ ಗೊಡ್ಡು ಎಮ್ಮೆಯಿಂದ ಹಾಲು ಕರೆಯಿಸಿದರು.ಮಾರುತಿ ದೇವಸ್ಥಾನದ ಕಾರ್ತಿಕೋತ್ಸವದಲ್ಲಿ ನೀರು ಹಾಕಿ ದೀಪ ಬೆಳಗಿಸಿ ಪವಾಡ ಮಾಡಿದರು.ತುಂಟನಾಗಿದ್ದ ಅವರು ದೊಡ್ಡವರ ಮೇಲೆ ಉಗುಳುವುದು, ಸೆಗಣಿ ಎರಚುವುದು, ಕಲ್ಲಿನಿಂದ ಹೊಡೆಯುವುದು ಮಾಡುತ್ತಿದ್ದರು.
ವಿಚಿತ್ರವೆಂದರೆ ಇಂತಹ ಕಿಟಲೆಯಿಂದ ಜನರ ರೋಗ ಗುಣಮುಖವಾಗುತ್ತಿದ್ದವು ಪವಾಡಗಳು ಮಾಡಿದ್ದಾರೆ ಬಾಬ.ಇನ್ನೂ ಭಕ್ತಿಯಿಂದ ಬೇಡಿಕೊಂಡವರ ಇಷ್ಟಾರ್ಥಗಳನ್ನು ಈಡೇರಿಸುವ ದತ್ತಗುರು ಸದಾನಂದ ಬಾಬಾ,ಭಕ್ತರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.ಇನ್ನೂ ಪರಸನಹಳ್ಳಿ ಗ್ರಾಮದ ಸದ್ಗುರು ಸದಾನಂದ ಬಾಬಾರವರ ಆಶ್ರಮದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಬೆಳಗಿನಿಂದ ಕರ್ತೃಗದ್ದುಗೆಯ ಪೂಜೆ, ಪಾದುಕಾಭಿಷೇಕ, ತೊಟ್ಟಿಲೋತ್ಸವ, ಮಹಿಳೆಯಿರಿಂದ ಆರತಿ ಭಜನೆ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ಪಲ್ಲಕ್ಕಿ ಉತ್ಸವಕ್ಕೆ ಸಹ ಬಲು ಅದ್ದೂರಿಯಿಂದ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಒಟ್ಟಿನಲ್ಲಿ ಭಕ್ತಿ, ಶ್ರದ್ಧೆ ಹಾಗೂ ಜನಪದ ಸಂಸ್ಕೃತಿಯ ಸಂಗಮವಾಗಿರುವ ಪರಸನಹಳ್ಳಿಯ ಶ್ರೀ ದತ್ತಗುರು ಸದಾನಂದ ಬಾಬಾರವರ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನೆರವೇರಿತು. ರಾಜ್ಯ-ಹೊರರಾಜ್ಯಗಳಿಂದಲೂ ಬಾಬಾರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ದರ್ಶನ ಪಡೆದ ಪುನೀತರಾದ್ರು
