Chikkodi

​ಶ್ರೀ ಬೀರೇಶ್ವರ ಸೊಸೈಟಿಯ ಸದಸ್ಯರಿಗೆ 12% ಲಾಭಾಂಶ ಹಾಗೂ ಸಿಬ್ಬಂದಿಗೆ 10% ಬೋನಸ್ ಘೋಷಣೆ: ಅಪ್ಪಾಸಾಹೇಬ ಜೊಲ್ಲೆ

Share

ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ವಿಸ್ತರಿಸಿಕೊಂಡು ಬಹುರಾಜ್ಯ ಸಹಕಾರಿ ಕ್ಷೇತ್ರದಲ್ಲಿ ಮೈಲಿಗಲ್ಲು ಸ್ಥಾಪಿಸಿರುವ ‘ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ., ಯಕ್ಸಂಬಾ (ಬಹುರಾಜ್ಯ)’ ಸಂಸ್ಥೆಯು 2025-26 ನೇ ಸಾಲಿನಲ್ಲಿಯೂ ಅಭೂತಪೂರ್ವ ಆರ್ಥಿಕ ಯಶಸ್ಸು ಸಾಧಿಸಿದೆ. ವಾರ್ಷಿಕ ಸರ್ವಸಾಧಾರಣ ಸಭೆಯ ನಿರ್ಣಯದಂತೆ ಸದಸ್ಯರಿಗೆ ಶೇ. 12ರಷ್ಟು ಷೇರು ಲಾಭಾಂಶ ಹಾಗೂ ಸಿಬ್ಬಂದಿ ವರ್ಗಕ್ಕೆ ಶೇ. 10ರಷ್ಟು ಬೋನಸ್ ವಿತರಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಅಪ್ಪಾಸಾಹೇಬ ಜೊಲ್ಲೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯಕ್ಸಂಬಾದ ನೂತನ ಆಡಳಿತ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ​
​1991ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಬಹುರಾಜ್ಯ ಕಾಯ್ದೆ 2002ರ ಅಡಿಯಲ್ಲಿ ನೋಂದಣಿಯಾಗಿದೆ. ಪ್ರಸ್ತುತ ಸಂಸ್ಥೆಯು ಕರ್ನಾಟಕದಲ್ಲಿ 180, ಮಹಾರಾಷ್ಟ್ರದಲ್ಲಿ 50 ಹಾಗೂ ಗೋವಾದಲ್ಲಿ 5 ಸೇರಿದಂತೆ ಒಟ್ಟು 235 ಶಾಖೆಗಳ ಜಾಲವನ್ನು ಹೊಂದಿದ್ದು, 4.60 ಲಕ್ಷಕ್ಕೂ ಅಧಿಕ ಸದಸ್ಯರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ.
​ಆರ್ಥಿಕ ಪ್ರಗತಿಯ ವಿವರಗಳು
​ಒಟ್ಟು ಠೇವಣಿಗಳು: ₹5,754.96 ಕೋಟಿ
​ವಿತರಿಸಲಾದ ಸಾಲ: ₹4,121.05 ಕೋಟಿ
​ಕಳೆದ ಆರ್ಥಿಕ ವರ್ಷದ ನಿವ್ವಳ ಲಾಭ (2025-26): ₹51.04 ಕೋಟಿ

​ಸದಸ್ಯರಿಗೆ ಲಾಭಾಂಶ: 2024-25ನೇ ಸಾಲಿನ ₹34,92,16,400/- ಷೇರು ಬಂಡವಾಳದ ಮೇಲೆ ಶೇಕಡಾ 12ರಂತೆ ಒಟ್ಟು ₹4,19,05,968/- ಗಳ ಲಾಭಾಂಶವನ್ನು 4,08,233 ಸದಸ್ಯರ ಉಳಿತಾಯ ಖಾತೆಗೆ ಜಮಾ ಮಾಡಲಾಗಿದೆ. ಸದಸ್ಯರು ತಮ್ಮ ಖಾತೆಯಿಂದ ಈ ಹಣವನ್ನು ಪಡೆದುಕೊಳ್ಳಬಹುದಾಗಿದೆ.

​2025-26ನೇ ಸಾಲಿನ ನಿವ್ವಳ ಲಾಭದ ಶೇಕಡಾ 10ರಷ್ಟು ಅಂದರೆ ಒಟ್ಟು ₹3,68,54,855/- ಗಳ ಬೋನಸ್ ಹಣವನ್ನು ಸಂಸ್ಥೆಯ 1,476 ಸಿಬ್ಬಂದಿಗಳಿಗೆ ಹಂಚಲಾಗುತ್ತಿದೆ.
​ಮಾರ್ಗದರ್ಶನ ಮತ್ತು ಸಂಸ್ಥೆಯ ಬೆಳವಣಿಗೆ:
​ಸಂಸ್ಥೆಯ ಸಂಸ್ಥಾಪಕರು, ಚಿಕ್ಕೋಡಿಯ ಮಾಜಿ ಸಂಸದರು ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಅಣ್ಣಾಸಾಹೇಬ ಶಂಕರ ಜೊಲ್ಲೆ ಅವರ ನೇತೃತ್ವದಲ್ಲಿ ಮತ್ತು ಸಹಸಂಸ್ಥಾಪಕರು, ಮಾಜಿ ಸಚಿವರೂ ಆದ ನಿಪ್ಪಾಣಿ ಶಾಸಕಿ ಸೌ. ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರ ಸೂಕ್ತ ಮಾರ್ಗದರ್ಶನದಲ್ಲಿ ಸಂಸ್ಥೆಯು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಈ ಅಭೂತಪೂರ್ವ ಪ್ರಗತಿಗೆ ಸದಸ್ಯರ ವಿಶ್ವಾಸ, ಆಡಳಿತ ಮಂಡಳಿಯ ಮಾರ್ಗದರ್ಶನ ಹಾಗೂ ಸಿಬ್ಬಂದಿ ವರ್ಗದ ಪ್ರಾಮಾಣಿಕ ಸೇವೆಯೇ ಪ್ರಮುಖ ಕಾರಣ ಎಂದು ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದರು.

​​ಈ ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿಪ್ರಸಾದ ಜೊಲ್ಲೆ, ಸಂಸ್ಥೆಯ ಉಪಾಧ್ಯಕ್ಷರಾದ ಆನಂದ ಪಾಟೀಲ, ನಿರ್ದೇಶಕರಾದ ಯಾಸಿನ್ ತಾಂಬೂಲೆ, ಚೇತನ ದೇಶಪಾಂಡೆ, ಪ್ರಧಾನ ವ್ಯವಸ್ಥಾಪಕರಾದ ಬಹದ್ದೂರ ಗುರವ, ಉಪಪ್ರಧಾನ ವ್ಯವಸ್ಥಾಪಕರಾದ ಮಹಾದೇವ ಮಂಗಾವತೆ, ರಮೇಶ ಕುಂಬಾರ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶೇಖರ ಪಾಟೀಲ ಉಪಸ್ಥಿತರಿದ್ದರು.

Tags:

error: Content is protected !!