Khanapur

ಜಿಲ್ಲಾ ಪಂಚಾಯತ್ / ತಾಲೂಕು ಪಂಚಾಯತ್ ಚುನಾವಣೆ ಕುರಿತು ಮಹತ್ವದ ಸಭೆ

Share

ಖಾನಾಪೂರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿಗಳಾದ ಡಾ. ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಅವರಿಂದ ಖಾನಾಪೂರ ಕಾಂಗ್ರೆಸ್ ಸಭೆ ಆಯೋಜನೆ ಮಾಡಲಾಗಿದ್ದು

ಮುಂಬರುವ ಜಿಲ್ಲಾ ಪಂಚಾಯತ್ (ZP) ಹಾಗೂ ತಾಲೂಕು ಪಂಚಾಯತ್ (TP) ಚುನಾವಣೆಗಳ ಹಿನ್ನೆಲೆಯಲ್ಲಿ ಖಾನಾಪೂರ ಕಾಂಗ್ರೆಸ್ ಪಕ್ಷದ ಸಭೆಯನ್ನು ಕರೆದಿದ್ದಾರೆ.

*ದಿನಾಂಕ:* ಮಂಗಳವಾರ, 13/10/2026
*ಸಮಯ:* ಬೆಳಿಗ್ಗೆ 11:00 ಗಂಟೆಗೆ *ಸ್ಥಳ:* ರಾಯಗಡ ನಿವಾಸ, ದುರ್ಗಾನಗರ, ಖಾನಾಪೂರದಲ್ಲಿ.

ಈ ಸಭೆಯಲ್ಲಿ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ಕುರಿತು ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಯುವಕರು ಹಾಗೂ ಮಹಿಳೆಯರೊಂದಿಗೆ ಚರ್ಚೆ ನಡೆಸಲಾಗುವುದು.

ಆದ್ದರಿಂದ ಕಾಂಗ್ರೆಸ್ ಪಕ್ಷದ ಎಲ್ಲಾ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗುವಂತೆ ಡಾ. ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಅವರು ಮನವಿ ಮಾಡಿದ್ದಾರೆ.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!