Politics

ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿಯಾಗಲಿ: ಅಜ್ಮೇರ್ ದರ್ಗಾದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಪಪ್ಪು ತಾಶೇವಾಲೆ ವಿಶೇಷ ಪ್ರಾರ್ಥನೆ!

Share

ಅಜ್ಮೇರ್: ಸಚಿವ ಸತೀಶ್ ಜಾರಕಿಹೊಳಿ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಕೆಪಿಸಿಸಿ ಮೈನಾರಿಟಿ ವಿಭಾಗದ ರಾಜ್ಯ ಕಾರ್ಯದರ್ಶಿ ಪಪ್ಪು ತಾಶೇವಾಲೆ ಕುಟುಂಬ ಸಮೇತ ಅಜ್ಮೇರ್ ದರ್ಗಾದಲ್ಲಿ ವಿಶೇಷ ದುವಾ ಸಲ್ಲಿಸಿದ್ದಾರೆ. ಸಾಹುಕಾರರ ಅಭಿಮಾನಿಗಳ ಈ ಹರಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.

ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನಾಡಿನ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಬೇಕೆಂದು ಅವರ ಅಪ್ಪಟ ಅಭಿಮಾನಿ, ಕೆಪಿಸಿಸಿ ಮೈನಾರಿಟಿ ವಿಭಾಗದ ರಾಜ್ಯ ಕಾರ್ಯದರ್ಶಿ ಪಪ್ಪು ತಾಶೇವಾಲೆ ರಾಜಸ್ಥಾನದ ಪ್ರಸಿದ್ಧ ಅಜ್ಮೇರ್ ಖ್ವಾಜಾ ಗರೀಬ್ ನವಾಜ್ ದರ್ಗಾಕ್ಕೆ ಭೇಟಿ ನೀಡಿ ಕುಟುಂಬದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಹರಕೆ ಹೊತ್ತಿದ್ದಾರೆ. ಖಾನಾಪೂರ ಸೇರಿದಂತೆ ರಾಜ್ಯಾದ್ಯಂತ ಅಪಾರ ಬೆಂಬಲಿಗರನ್ನು ಹೊಂದಿರುವ ಸತೀಶ್ ಜಾರಕಿಹೊಳಿ ಅವರು ಉನ್ನತ ಹುನ್ನಾರಕ್ಕೆ ಏರಬೇಕೆಂಬುದು ಕೇವಲ ಇವರೊಬ್ಬರಲ್ಲದೆ ಲಕ್ಷಾಂತರ ಅಭಿಮಾನಿಗಳ ಅಂತರಾಳದ ಆಸೆಯಾಗಿದ್ದು, ಈ ಸಂದರ್ಭದಲ್ಲಿ ಪಪ್ಪು ತಾಶೇವಾಲೆ ಅವರ ಧರ್ಮಪತ್ನಿ, ಮಕ್ಕಳು ಹಾಗೂ ಇತರ ಅಭಿಮಾನಿಗಳು ಉಪಸ್ಥಿತರಿದ್ದು ಸಾಹುಕಾರರ ಮುಂದಿನ ರಾಜಕೀಯ ಯಶಸ್ಸಿಗಾಗಿ ಪ್ರಾರ್ಥಿಸಿದರು.

Tags:

error: Content is protected !!