Politics

ಮಥುರಾದಲ್ಲಿ ಎಐಸಿಸಿ ಕಾರ್ಯದರ್ಶಿ ಅಂಜಲಿ ನಿಂಬಾಳ್ಕರ್ ಮಹಾನಗರ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳೊಂದಿಗೆ ಒನ್ ಟು ಒನ್ ಸಭೆ

Share

ಉತ್ತರ ಪ್ರದೇಶದ ಮಥುರಾದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಮಥುರಾ ಮಹಾನಗರ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳೊಂದಿಗೆ ಪ್ರತ್ಯೇಕವಾಗಿ ಮುಖಾಮುಖಿ ಸಭೆ ನಡೆಸಿರುವ ಅವರು, ಪಕ್ಷದ ಮುಂದಿನ ರೂಪುರೇಷೆಗಳ ಕುರಿತು ಮುಕ್ತ ಚರ್ಚೆ ನಡೆಸಿದ್ದಾರೆ.

ಪಕ್ಷದ ಸಂಘಟನೆಯ ಕುರಿತು ಆಕಾಂಕ್ಷಿಗಳಿಂದ ಮುಕ್ತ ಅಭಿಪ್ರಾಯಗಳನ್ನು ಪಡೆದುಕೊಂಡ ಅವರು, ಸಂಘಟನಾತ್ಮಕ ರೂಪರೇಷೆಗಳ ಬಗ್ಗೆಯೂ ಚರ್ಚೆ ನಡೆಸಿದರು. ಆಕಾಂಕ್ಷಿಗಳ ಪಟ್ಟಿ ಹಾಗೂ ಅವರು ಪಕ್ಷದ ಸಂಘಟನೆಗಾಗಿ ರೂಪಿಸಿರುವ ಮುಂಜಾಗ್ರತಾ ಯೋಜನೆಗಳ ಕುರಿತು ಹಿರಿಯ ವರಿಷ್ಠರಿಗೆ ಸಮಗ್ರ ವರದಿ ಸಲ್ಲಿಸುವುದಾಗಿ ಮತ್ತು ಯೋಗ್ಯ ಹಾಗೂ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

Tags:

error: Content is protected !!