Politics

ಆಳು ಮಕ್ಕಳನ್ನು ಬಿಟ್ಟು ಕೂಗಾಡಿಸಬೇಡಿ, ದಾಖಲೆ ನೀಡಿ”: ಆರ್.ಎಸ್.ಎಸ್ ನಾಯಕರಿಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ ನೇರ ಸವಾಲು! ಸರ್ಕಾರ ಧರ್ಮದ ನೋಂದಣಿ ಕೇಳುತ್ತಿಲ್ಲ…ಸಂಘಟನೆಯ ನೋಂದಣಿ ಕೇಳುತ್ತಿದೆ

Share

ಆರ್.ಎಸ್.ಎಸ್ ಸಂಘಟನೆಗೆ ನೋಟಿಸ್ ನೀಡಿರುವ ವಿಚಾರವಾಗಿ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರ ಟೀಕೆಗಳಿಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ತೀವ್ರ ತಿರುಗೇಟು ನೀಡಿದ್ದಾರೆ. “ನನ್ನ ಬಾಯಿ ಮುಚ್ಚಿಸಬೇಕಾದರೆ ಉಡಾಫೆಯ ಉತ್ತರಗಳನ್ನು ಬಿಟ್ಟು, ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡಿ” ಎಂದು ಅವರು ಖಡಕ್ ಆಗಿ ಸವಾಲು ಹಾಕಿದ್ದಾರೆ.

ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಗೃಹಸಚಿವ ಪ್ರಿಯಾಂಕ್ ಖರ್ಗೆ, “ಬೇರೆ ಸಂಘಟನೆಗಳಿಗೆ ಅನ್ವಯವಾಗುವ ನಿಯಮಗಳೇ ನಿಮಗೂ ಅನ್ವಯವಾಗುತ್ತವೆ. ನಾವು ಅಥವಾ ರಾಹುಲ್ ಗಾಂಧಿಯವರು ಅಮೆರಿಕಾಗೆ ಹೋದರೆ, ಯಾರು ದುಡ್ಡು ಕೊಟ್ಟರು, ಎಲ್ಲಿಂದ ಬಂತು ಎಂದು ಪ್ರಶ್ನಿಸುತ್ತೀರಿ. ಹಾಗಾದರೆ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಯಾರು ಸ್ಪಾನ್ಸರ್ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ಬೇಡವೇ? ನಾವು ರಾಜ್ಯಕ್ಕೆ ಬಂಡವಾಳ ತರಲು ವಿದೇಶಕ್ಕೆ ಹೋಗಬೇಕಾದರೆ ಸರ್ಕಾರ ಅನುಮತಿ ನೀಡಿಲ್ಲ, ಇವರು ಯಾಕೆ ಹೋಗುತ್ತಿದ್ದಾರೆ? ಇವರ ಚಟುವಟಿಕೆಗಳೇನು?” ಎಂದು ಪ್ರಶ್ನಿಸಿದರಲ್ಲದೆ, “ನಾವು ಯಾವುದೇ ಧರ್ಮಕ್ಕೆ ನೋಂದಣಿ ಕೇಳುತ್ತಿಲ್ಲ, ನಿಮ್ಮ ಸಂಘಟನೆಗೆ ಕೇಳುತ್ತಿದ್ದೇವೆ. ನೂರು ವರ್ಷಗಳ ಆಚರಣೆ ಮಾಡುವವರು ಸಂವಿಧಾನ ಮತ್ತು ಕಾನೂನಿಗೆ ಗೌರವ ಕೊಡಲಿ, ಅದಕ್ಕೆ ನಮ್ಮ ವಿರೋಧವಿಲ್ಲ” ಎಂದರು.

ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಗೃಹಸಚಿವರು, ” ಆರ್.ಎಸ್.ಎಸ್ ಬಗ್ಗೆ ವೈಯಕ್ತಿಕವಾಗಿ ನಾನಲ್ಲ, ಸರ್ಕಾರ ಉತ್ತರ ಕೇಳುತ್ತಿದೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ಕಾರ್ಯಕ್ರಮಗಳನ್ನು ಆಯೋಜಿಸಿ. ನಿಮ್ಮ ಕಾರ್ಯಕರ್ತರ ಮೂಲಕ ಬೀದಿಗಳಲ್ಲಿ ಕೂಗಾಡುವ ಬದಲಾಗಿ, ಕಾನೂನು ಸಲಹೆಗಾರರ ಮೂಲಕ ಅಧಿಕೃತ ಹೇಳಿಕೆ ನೀಡಿ.

ಕೇಂದ್ರ ಗೃಹ ಇಲಾಖೆ ನೀಡುವ ಅಡ್ವಾನ್ಸ್ ಸೆಕ್ಯೂರಿಟಿ ಲೈಸೆನ್ಸ್ ಹಾಗೂ ಭದ್ರತೆ ಮೋಹನ್ ಭಾಗವತ್ ಅವರಿಗೆ ಇರಬೇಕೋ ಬೇಡವೋ ಎಂಬುದನ್ನು ಜನರೇ ನಿರ್ಧರಿಸಲಿ. ಆರ್.ಎಸ್.ಎಸ್ ಪಥಸಂಚಲನದ ಸುರಕ್ಷತೆಗೆ ನಿಯೋಜನೆಗೊಳ್ಳುವ ನಮ್ಮ ಪೊಲೀಸ್ ಸಿಬ್ಬಂದಿಗೆ ಜನರ ತೆರಿಗೆಯಿಂದಲೇ ವೇತನ ನೀಡಲಾಗುತ್ತದೆ. ಹಾಗಾಗಿ, ನಿಮ್ಮ ಆಳು ಮಕ್ಕಳನ್ನು ಬಿಟ್ಟು ಕೂಗಾಡಿಸುವುದನ್ನು ನಿಲ್ಲಿಸಿ, ನಾವು ಕೇಳಿರುವ 7 ಪ್ರಶ್ನೆಗಳಿಗೆ ಸೂಕ್ತ ದಾಖಲೆಗಳ ಸಮೇತ ನೀವೇ ನೇರವಾಗಿ ಉತ್ತರ ನೀಡಿ” ಎಂದು ಸವಾಲು ಹಾಕಿದರು.

Tags:

error: Content is protected !!