Politics

ನಾನು ಯಾವಾಗಲೂ ತೃಪ್ತನಾಗಿದ್ದೇನೆ, ಒಟ್ಟಾಗಿ ಕೆಲಸ ಮಾಡ್ತೀವಿ: ಡಿಸಿಎಂ ಡಾ. ಜಿ. ಪರಮೇಶ್ವ

Share

ತುಮಕೂರಿನಲ್ಲಿ ಸಚಿವ ಕೆ.ಎನ್. ರಾಜಣ್ಣ ಅವರ ನಿವಾಸದಲ್ಲಿ ಸುದೀರ್ಘ ಅರ್ಧಗಂಟೆಗಳ ಕಾಲ ಮಹತ್ವದ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಜಿಲ್ಲೆಯ ನಾಯಕರೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ರವಾನಿಸುವುದೇ ಈ ಭೇಟಿಯ ಮುಖ್ಯ ಉದ್ದೇಶ ಎಂದಿದ್ದಾರೆ.

ಸಚಿವ ಕೆ.ಎನ್. ರಾಜಣ್ಣ ಅವರೊಂದಿಗೆ ತಮಗೆ 50 ವರ್ಷಗಳ ಸುದೀರ್ಘ ಗೆಳೆತನವಿದ್ದು, ನಾವೆಲ್ಲರೂ ಒಟ್ಟಾಗಿಯೇ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿರುವ ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಲು ಪ್ರಯತ್ನ ಪಡುತ್ತಿದ್ದೇವೆ ಎಂದ ಅವರು, ಮುಖ್ಯಮಂತ್ರಿಗಳದ್ದು ಖಾಸಗಿ ಭೇಟಿಯಾದ್ದರಿಂದ ತಾವು ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ತುಮಕೂರಿಗೆ ಸಿಎಂ ಸ್ಥಾನ ಸಿಗಬೇಕಿತ್ತೆಂಬ ನಿರೀಕ್ಷೆಯ ಕುರಿತು ಪ್ರತಿಕ್ರಿಯಿಸಿ, “ಅದು ಹೈಕಮಾಂಡ್ ತೀರ್ಮಾನ, ಅವರು ಡಿಕೆಶಿ ಅವರನ್ನು ಪರಿಗಣಿಸಿದ್ದಾರೆ, ನಾವು ಅವರ ಜೊತೆ ಒಟ್ಟಾಗಿ ಕೆಲಸ ಮಾಡಿ ಜನರಿಗೆ ಕೊಟ್ಟ ಭರವಸೆ ಈಡೇರಿಸುತ್ತೇವೆ ಹಾಗೂ ಸಿದ್ದರಾಮಯ್ಯ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

ಇದೇ ವೇಳೆ, ತಾವು ರಾಜಕಾರಣದಲ್ಲಿ ಯಾವಾಗಲೂ ಅತೃಪ್ತರಾಗಿಲ್ಲ, ಸಂಪೂರ್ಣ ತೃಪ್ತರಾಗಿದ್ದೇನೆ ಎಂದ ಪರಮೇಶ್ವರ್ ಅವರು, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವರಿಷ್ಠರೆಲ್ಲರೂ ಚರ್ಚಿಸಿಯೇ ತಮಗೆ ಕಂದಾಯ ಇಲಾಖೆಯನ್ನು ಜವಾಬ್ದಾರಿಯಾಗಿ ನೀಡಿದ್ದಾರೆ ಎಂದು ಹರಡಿದ್ದ ಎಲ್ಲಾ ವದಂತಿಗಳಿಗೆ ತೆರೆ ಎಳೆದರು.

Tags:

error: Content is protected !!