ಪಶ್ಚಿಮ ಪದವೀಧರ ಚುನಾವಣಾ ಅಖಾಡ ಈಗ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 6 ಕೊನೆಯ ದಿನವಾದ ಹಿನ್ನಲೆಯಲ್ಲಿ ಇಂದು ಅಕ್ಸಾ ಸಂಘಟನೆ ಮುಖಂಡ ಕಾಂತಕುಮಾರವರು ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸುವ ಮೂಲಕ ಅಧಿಕೃತವಾಗಿ ಪಶ್ಚಿಮ ಪದವೀಧರ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ.

ಉದ್ಯೋಗ ಆಕಾಂಕ್ಷಿಗಳ ಹೋರಾಟ ಸೇರಿ ಕೆಪಿಎಸ್‌ಸಿ ಹಗರಣ ಕುರಿತು ವಿದ್ಯಾರ್ಥಿಗಳ ಪರವಾಗಿ ಹೋರಾಟದೊಂದಿಗೆ ಗುರುತಿಸಿಕೊಂಡಿರುವ ಅಕ್ಸಾ ಸಂಘಟನೆಯ ಮುಖಂಡ ಕಾಂತಕುಮಾರವರು ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಆಗಮಿಸಿ ನಾಮಪತ್ರ ಸಲ್ಲಿಸಿದ್ದು, ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೆನೆ. ನಾನು ಯುವಕರ ಪರವಾಗಿ ಒಳ್ಳೆಯ ಕೆಲಸ ಮಾಡಲು ಸ್ಪರ್ಧೆ ಮಾಡುತ್ತಿದ್ದೇನೆ. ಪದವಿದರರು ಮನನ ನೋಡಿ ಮತದಾನ ಮಾಡಲಿ, ಕೆಪಿಎಸ್ ಸಿ ಹಗರಣವನ್ನ ಹೊರಗಡೆ ತಂದಿದ್ದೆನೆ. ಇನ್ನು ಕೆಲವೊಂದಿಷ್ಟು ರಾಜಕಾರಣಿಗಳು ಇದ್ದಾರೆ, ಸಾಕಷ್ಟು ದೊಡ್ಡ ದೊಡ್ಡ ಅಧಿಕಾರಿಗಳನ್ನ ಜೈಲಿಗೆ ಕಳುಹಿಸುವ ಕೆಲಸ ಆಗಬೇಕಿದೆ. ಕೆಪಿಎಸ್ ಸಿ ಸದಸ್ಯರು ಹಣ ಪಡೆದುಕ್ಕೊಂಡು ನೇಮಕಾತಿ ಮಾಡಿಕ್ಕೊಳ್ಳುತ್ತಾರೆ, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 95 ಸಾವಿರ ಜನ ಮತದಾರರು ಇದ್ದಾರೆ. ಮತಗಳು ಪ್ರಶ್ನೆಯಾಗಿ ಕನ್ವರ್ಟ ಆಗಲಿ, ಈ ಚುನಾವಣೆ ನಂದಲ್ಲ ನೊಂದ ಯುವಕರ, ಮಹಿಳೆಯರ್, ಸಿನಿಯರ್ ಸಿಟಿಜನ್ ಪರವಾಗಿ ಕೆಲಸ ಮಾಡಲು ಬಯಸಿದ್ದೆನೆ. ನನಗೆ ಎಲ್ಲರೂ ವಾಲಂಟ್ರಿಯಾಗಿ ಕರಿತಾ ಇದಾರೆ. ಕಾಂಗ್ರೆಸ್ ನಲ್ಲಿರುವ ಕೆಲ ಶಾಸಕರು, ಕಾರ್ಯಕರ್ತರು ನನಗೆ ಸಪೋರ್ಟ ಮಾಡುತ್ತಿದ್ದಾರೆ. ನನಗೆ ಮತ ಹಾಕುವ ಉದ್ದೆಶದಿಂದಲೆ ಒಂದೆ ತಿಂಗಳಲ್ಲಿ 10,000 ಜನರ ಓಟರ್ ಐಡಿ ಮಾಡಿಸಿಕ್ಕೊಂಡಿದ್ದಾರೆ. ನನಗೆ ನಾಲ್ಕು ಜಿಲ್ಲೆಗಳಿಂದ ಸಪೋರ್ಟ್ ಇದೆ, ನಾನು ನಾಮಪತ್ರ ಸಲ್ಲಿಸಿದ್ದೆನೆ ಎಂದು ಹೇಳುವ ಮೂಲಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
