Dharwad

ಮಾಜಿ ಸಚಿವ ಎಂ ಸಿ ಸುಧಾಕರ್ & ಶಾಸಕ‌ ಪ್ರದೀಪ್ ಈಶ್ವರ ಟಾಕ್ ವಾರ್‌ಗೆ ಕೆಪಿಸಿಸಿ ಅಧ್ಯಕ್ಷ ಪ್ರತಿಕ್ರಿಯೆ….

Share

ಮಾಜಿ ಸಚಿವ ಎಂ.ಸಿ. ಸುಧಾಕ‌ರ್ ಹಾಗೂ ಶಾಸಕ ಪ್ರದೀಪ್‌ ಈಶ್ವರ ನಡುವಿನ ವಾಕ್ಸಮರದ ಕುರಿತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಧಾರವಾಡದಲ್ಲಿ ಪ್ರತಿಕ್ರಿಯಿಸಿ, ಬೆಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಯತ್ನಾಳ ಹೆಸರು ಪ್ರಸ್ತಾಪಿಸಿ ಟಾಂಗ್ ನೀಡಿದರು.

ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸುಧಾಕ‌ರ್ ಹಾಗೂ ಪ್ರದೀಪ್ ಈಶ್ವರ ನಡುವಿನ ವಾಕ್ಸಮರ ವಿಚಾರದ ಬಗ್ಗೆ ಆಮೇಲೆ ಮಾತನಾಡುತ್ತೇನೆ. ಮೊದಲು ಜೂನಿಯರ್ ಯಡಿಯೂರಪ್ಪ ಹಾಗೂ ಯತ್ನಾಳ ಅವರ ನಡುವೆ ನಡೆಯುತ್ತಿರುವ ವಿಚಾರದ ಬಗ್ಗೆ ಮಾತನಾಡಲಿ. ಬಳಿಕ ಸುಧಾಕರ್ ಹಾಗೂ ಪ್ರದೀಪ್‌ ಈಶ್ವರ ಪ್ರಕರಣಕ್ಕೆ ಉತ್ತರ ನೀಡುತ್ತೇನೆ” ಎಂದು ಹೇಳಿದರು. ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಗೆಲ್ಲುತ್ತಿದ್ದರು. ಆದರೆ ಈಗ ಅವರ ಬಂಡವಾಳ ಬಯಲಾಗಿದೆ. ಎಸ್‌ಐಆರ್ ಮೂಲಕ ಜನರಿಗೆ ಎಲ್ಲವೂ ಗೊತ್ತಾಗಿದೆ. ನಾಳೆ ದೆಹಲಿಗೆ ತೆರಳಲಿದ್ದು, ಪಕ್ಷದ ಶಾಸಕರು ಹಾಗೂ ಸಚಿವರು ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಗೆ ಆಗಮಿಸಲಿದ್ದಾರೆ. ಲಕ್ಷ್ಮಣ ಸವದಿ, ಸಂತೋಷ ಲಾಡ್, ರುದ್ರಪ್ಪ ಲಮಾಣಿ ಹಾಗೂ ಎಚ್.ಕೆ. ಪಾಟೀಲ್‌ ಸೇರಿದಂತೆ ಮುಖಂಡರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

Tags:

error: Content is protected !!