Dharwad

ಪಶ್ಚಿಮ ಪದವೀಧರ ಚುನಾವಣೆ ಹಿನ್ನೆಲೆ ಧಾರವಾಡಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭೇಟಿ; ಸಚಿವ ಲಾಡ್, ಅಭ್ಯರ್ಥಿ ಲಿಂಬಿಕಾಯಿ ಹಾಗೂ ಕೊನರೆಡ್ಡಿ ಜೊತೆ ಮಹತ್ವದ ಸಭೆ.

Share

ಪಶ್ಚಿಮ ಪದವೀಧರ ಚುನಾವಣೆ ಅಕ್ಟೋಬರ್ 23ಕ್ಕೆ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಚುನಾವಣೆ ಕಾರ್ಯತಂತ್ರ ರಚಿಸಲು ಇಂದು ಧಾರವಾಡಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭೇಟಿ ನೀಡಿ ಪಕ್ಷದ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿದರು.

ಧಾರವಾಡದ ನವಲೂರು ಬಳಿಯ ಖಾಸಗಿ ಹೋಟೆಲ್‌ನಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಹಾಗೂ ನವಲಗುಂದ ಶಾಸಕ ಎನ್.ಹೆಚ್. ಕೊನರೆಡ್ಡಿ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಚುನಾವಣೆಯ ಕುರಿತು ಕೈಗೊಂಡ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಅಲ್ಲದೆ, ಮತದಾನಕ್ಕೆ ಇಂದಿನಿಂದ 19 ದಿನಗಳು ಬಾಕಿ ಇದ್ದು, ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡುವ ಮೂಲಕ ಪಕ್ಷದ ಅಭ್ಯರ್ಥಿ ಲಿಂಬಿಕಾಯಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ಇಲ್ಲಿರುವ ಎಲ್ಲರ ಮೇಲೆ ಇದೆ ಎಂದು ಹೇಳುವ ಮೂಲಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಕೈ ಮುಖಂಡರೊಂದಿಗೆ ಸಭೆ ಮಾಡಿದರು.

Tags:

error: Content is protected !!