Dharwad

ಕೇಂದ್ರ ಸಚಿವರ ಭಾವಚಿತ್ರ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್

Share

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಶ್ರದ್ಧಾಂಜಲಿ ಎಂದು ಫೋಟೋ ಎಡಿಟ್ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯುವಕನೊಬ್ಬನ ಮೇಲೆ ಇದೀಗ ಧಾರವಾಡ ಶಹರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಿದ್ದು ಬಾಡ ಊರ್ಫ ಕುಲಕರ್ಣಿ ಎಂಬ ಯುವಕ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಫೋಟೋ ಎಡಿಟ್ ಮಾಡಿ ಅದರಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಎಂದು ಹಾಕಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ. ಅಲ್ಲದೇ ತಾನು ಯಾವುದೇ ಎಂಪಿಗಳಿಗೆ ಹೆದರುವುದಿಲ್ಲ ಎಂದೂ ಬರೆದುಕೊಂಡಿದ್ದ. ಈ ಹಿನ್ನೆಲೆ ಬಿಜೆಪಿ ಯುವಮೋರ್ಚಾದ ವತಿಯಿಂದ ಇದೀಗ ಸಿದ್ದು ಎಂಬಾತನ ಮೇಲೆ ಧಾರವಾಡ ಶಹರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Tags:

error: Content is protected !!