Belagavi

ಬೆಳಗಾವಿ ಎಂ.ಎಲ್.ಐ.ಆರ್.ಸಿಯಲ್ಲಿ ಪ್ರಥಮಬಾರಿಗೆ ತ್ರಿ-ಸೇವಾ ಮಾಜಿ ಸೈನಿಕರ ರ್ಯಾಲಿ: ಪಿಂಚಣಿ ಸಮಸ್ಯೆ ಪರಿಹಾರಕ್ಕೆ ಒತ್ತು

Share

ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ವಂಚನೆ ಹಾಗೂ ನಕಲಿ ಕರೆಗಳ ಕುರಿತು ಮಾಜಿ ಸೈನಿಕರು ಎಚ್ಚರಿಕೆ ವಹಿಸಬೇಕು ಎಂದು ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ಜಿಒಸಿ ಮೇಜರ್ ಜನರಲ್ ಭರತ್ ಮೆಹ್ತಾನಿ ಅವರು ಕರೆ ನೀಡಿದರು.

ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನ ದಕ್ಷಿಣ ಭಾರತ ಮುಖ್ಯಾಲಯದ ವತಿಯಿಂದ ಶಿವಾಜಿ ಕ್ರೀಡಾಂಗಣದಲ್ಲಿ ತ್ರಿ-ಸೇವೆಗಳ (ಸೇನೆ, ನೌಕಾಪಡೆ ಮತ್ತು ವಾಯುಪಡೆ) ಮಾಜಿ ಸೈನಿಕರ ಸಮಾವೇಶ, ಟ್ರೈ-ಸರ್ವಿಸ್ ಎಕ್ಸ್ ಸರ್ವಿಸಮ್ಯಾನ್ ರ್ಯಾಲಿ ಹಾಗೂ ಜಾಬ್ ಫೇರ್ ಅನ್ನು ಅತ್ಯಂತ ವ್ಯವಸ್ಥಿತವಾಗಿ ಹಮ್ಮಿಕೊಳ್ಳಲಾಯಿತು. ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ಜಿಒಸಿ ಮೇಜರ್ ಜನರಲ್ ಭರತ್ ಮೆಹ್ತಾನಿ ಅವರು ಸಮಾವೇಶವನ್ನು ಪರಿಶೀಲಿಸಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ಕುಟುಂಬಸ್ಥರಿಗೆ ವಿಶೇಷ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೇಜರ್ ಜನರಲ್ ಭರತ್ ಮೆಹ್ತಾನಿ, ಮಾಜಿ ಸೈನಿಕರು, ವೀರ ನಾರಿಯರು ಮತ್ತು ಅವರ ಕುಟುಂಬಗಳ ಕಲ್ಯಾಣ, ವೈದ್ಯಕೀಯ ನೆರವು ಹಾಗೂ ಪಿಂಚಣಿ ಸಮಸ್ಯೆಗಳ ಪರಿಹಾರಕ್ಕಾಗಿ ಈ ರ್ಯಾಲಿ ಅತ್ಯಂತ ಮಹತ್ವದ್ದಾಗಿದೆ ಎಂದರು. ಕಳೆದ ಒಂದು ವರ್ಷದಲ್ಲಿ ಇನ್ವ್ಯಾಲಿಡ್ ಆದ ಸೈನಿಕರಿಗೆ ಪಿಂಚಣಿ ದಾಖಲೆ ಸಿದ್ಧಪಡಿಸುವುದು ಮತ್ತು ಡಿ.ಸಿ.ಆರ್.ಜಿ. ಲೆಕ್ಕಾಚಾರದ ದೋಷಗಳನ್ನು ಸರಿಪಡಿಸಿ ಕೋಟ್ಯಂತರ ರೂಪಾಯಿ ಆರ್ಥಿಕ ಪ್ರಯೋಜನ ಒದಗಿಸಿರುವುದನ್ನು ಅವರು ಶ್ಲಾಘಿಸಿದರು. ಅಲ್ಲದೆ, ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ವಂಚನೆ ಹಾಗೂ ನಕಲಿ ಕರೆಗಳ ಕುರಿತು ಮಾಜಿ ಸೈನಿಕರು ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ ಈ ತ್ರಿ-ಸೇವಾ ರ್ಯಾಲಿಯ ಕುರಿತು ಮಾತನಾಡಿದ ಬ್ರಿಗೇಡಿಯರ್ ಗಿರೀಶ್ ಉಪಾಧ್ಯಾಯ, ಮೂರೂ ಸೇನೆಗಳ ಮಾಜಿ ಸೈನಿಕರಿಗಾಗಿ ವಿವಿಧ ದಾಖಲಾತಿ ಕಚೇರಿಯ ಪ್ರತಿನಿಧಿಗಳು ಆಗಮಿಸಿ ಸ್ಥಳದಲ್ಲೇ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ ಎಂದರು. ಸ್ಪರ್ಷ್ (SPARSH) ವ್ಯವಸ್ಥೆಯ ಮೂಲಕ ಪಿಂಚಣಿ ವಿತರಣೆಯಲ್ಲಿ ಎದುರಾಗುತ್ತಿರುವ ತಾಂತ್ರಿಕ ಹಾಗೂ ಡೇಟಾ ಮೈಗ್ರೇಷನ್ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ತಿಳಿಸಿ, ಎಲ್ಲರೂ ಈ ಸರ್ಕಾರದ ಕಲ್ಯಾಣ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಬೈಟ್
ಈ ವೇಳೆ ಕ್ರೀಡಾಂಗಣದಲ್ಲಿ ಮೂರೂ ಸೇನಾಪಡೆಗಳ ಮಾಜಿ ಸೈನಿಕರು ಹಾಗೂ ಅವರ ಕುಟುಂಬಸ್ಥರು ಭಾಗಿಯಾಗಿದ್ಧರು.

Tags:

error: Content is protected !!