Belagavi

ಬಾಳೇಕುಂದ್ರಿ ಕೆ.ಎಚ್. ಗ್ರಾಮದಲ್ಲಿ ಮಳೆಗಾಗಿ ಶೃಂಗ ಋಷಿ ಪೂಜೆ

Share

ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಕೆ.ಎಚ್. ಗ್ರಾಮದಲ್ಲಿ ಮಳೆ ಇಲ್ಲದೆ ಕಂಗಾಲಾಗಿರುವ ರೈತರು, ಮಳೆರಾಯನನ್ನು ಒಲಿಸಿಕೊಳ್ಳಲು ವಿಶಿಷ್ಟ ಧಾರ್ಮಿಕ ವಿಧಿವಿಧಾನಗಳ ಮೊರೆ ಹೋಗಿದ್ದಾರೆ. ಹೌದು, ಬೆಳೆಗಳು ಒಣಗುತ್ತಿರುವುದರಿಂದ ಕಳವಳಕ್ಕೊಳಗಾದ ಗ್ರಾಮಸ್ಥರು ಶೃಂಗ ಋಷಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಗೆಳೆಯ ಕೆಲವು ದಿನಗಳಿಂದ ಮಳೆ ಕೈಕೊಟ್ಟಿದ್ದು ಮತ್ತು ಮೈಸುಡುವ ಬಿಸಿಲಿನ ಪ್ರಖರತೆಯಿಂದಾಗಿ ಬಾಳೇಕುಂದ್ರಿ ಕೆ.ಎಚ್. ಗ್ರಾಮದ ಸುತ್ತಮುತ್ತಲಿನ ರೈತರು ತೀವ್ರ ಚಿಂತೆಗೆ ಒಳಗಾಗಿದ್ದಾರೆ. ಭತ್ತ, ಕಬ್ಬು, ಸೋಯಾಬಿನ್ ಸೇರಿದಂತೆ ಪ್ರಮುಖ ಬೆಳೆಗಳು ಒಣಗಿ ಬಾಡುತ್ತಿದ್ದು, ದೊಡ್ಡ ಪ್ರಮಾಣದ ನಷ್ಟದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಗ್ರಾಮಸ್ಥರು ಮಳೆಗಾಗಿ ದೈವಿಕ ಮಾರ್ಗವನ್ನು ಹಿಡಿದಿದ್ದು, ಗುರುವಾರ ಗ್ರಾಮದೇವತೆ ಶ್ರೀ ಕಲ್ಮೇಶ್ವರ ಮಂದಿರದ ಪ್ರಾಂಗಣದಲ್ಲಿ ಮಣ್ಣಿನಿಂದ ಶೃಂಗ ಋಷಿಯ ಮೂರ್ತಿ ತಯಾರಿಸಿ ಪ್ರತಿಷ್ಠಾಪಿಸಿದ್ದಾರೆ. ರುದ್ರಾಕ್ಷಿ, ಗುಲಾಲ್ ಹಾಗೂ ಹೂವಿನ ಹಾರಗಳಿಂದ ಮೈಸೂರು ಶೈಲಿಯಲ್ಲಿ ಮೂರ್ತಿಯನ್ನು ಸಿಂಗರಿಸಲಾಗಿದ್ದು, ಶುಕ್ರವಾರ ಬೆಳಿಗ್ಗೆ ವಿಶೇಷ ಪೂಜೆ ಹಾಗೂ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ. ಮಳೆ ಬರುವವರೆಗೆ ನಿತ್ಯ ಆರತಿ ಹಾಗೂ ಪೂಜಾ ಕೈಂಕರ್ಯಗಳು ಮುಂದುವರಿಯಲಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ

Tags:

error: Content is protected !!