ಹುಕ್ಕೇರಿ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸ ಬೇಕು ಎಂದು ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.


ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶದಿಂದ ಕೈ ಬೀಟ್ಟ ಹಿನ್ನಲೆಯಲ್ಲಿ ಇಂದು ಶಾಸಕ ನಿಖಿಲ್ ಕತ್ತಿ ನೇತೃತ್ವದಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ ಒರುಗಿಸಿ ಕೇಲ ಕಾಲ ಕೋರ್ಟ ಸರ್ಕಲ್ ಬಂದ ಮಾಡುವ ಮೂಲಕ ಜನರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಿನ ಜಾವ ನಗರದ ಪಿ ಕಾರ್ಡ ಬ್ಯಾಂಕ ಆವರಣದಲ್ಲಿ ಜಮಾವಣೆಗೊಂಡ ರೈತರು ರ್ಯಾಲಿ ಮುಖಾಂತರ ಕೋರ್ಟ ಸರ್ಕಲ್ ಬಳಿ ಆಗಮಿಸಿ ರಸ್ತೆ ಬಂದ ಮಾಡಿ ರಾಜ್ಯ ಸರ್ಕಾರ ವಿರುದ್ಧ ಘೋಷನೆ ಹಾಕಿ ಪ್ರತಿಭಟನೆ ಮಾಡಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉತ್ತರ ಅರೆ ಮಲೆನಾಡು ಪ್ರದೇಶದಲ್ಲಿ ಎಪ್ರಿಲ್ ಅಂತ್ಯದವರೆಗೆ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ರೈತರು ಬಿತ್ತನೆ ಕಾರ್ಯ ಮುಗಿಸಿದರು ಆದರೆ ಮುಂದೆ ಅಗಷ್ಟ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಯಾಗದೆ ತಾಲೂಕಿನ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ ಕಾರಣ ಹುಕ್ಕೇರಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಹಾಗೂ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು ಮತ್ತು ರೈತರ ಸಾಲ ಮನ್ನಾ ಮಾಡಬೇಕು ಕೆರೆ ನೀರು ಪಡೆಯಲು ಮತ್ತು ವಿದ್ಯಾರ್ಥಿಗಳಿಗೆ ಸಹಕಾರಿ ಯಾಗಲು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಹುಕ್ಕೇರಿ ಕ್ಷೇತ್ರದ ಜನರ ಪರವಾಗಿ ಇಂದು ಪ್ರತಿಭಟನೆ ಮಾಡಲಾಗುತ್ತಿದೆ ಎಂದರು

ಪ್ರತಿಭಟನಾಕಾರರು ರಸ್ತೆ ಬಂದ್ ಮಾಡಿದ ಹಿನ್ನಲೆಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡತಡೆ ಉಂಟಾಗಿತ್ತು , ಯಾವದೇ ಅಹಿತಕರ ಘಟನೆ ಜರುಗದಂತೆ ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ಶಿವ ಶಂಕರ ಗಣಾಚಾರಿ ನೇತೃತ್ವದಲ್ಲಿ ಸೀಕ್ತ ಪೋಲಿಸ್ ಬಂದೋಬಸ್ತ ಮಾಡಲಾಗಿತ್ತು.
ಪ್ರತಿಭಟನೆ ಯಲ್ಲಿ ಯಮಕನಮರ್ಡಿ ಬಿ ಜೆ ಪಿ ಮುಖಂಡ ಬಸವರಾಜ ಹುಂದ್ರಿ, ಮಹಾವೀರ ನಿಲಜಗಿ, ಸತ್ತೆಪ್ಪಾ ನಾಯಿಕ, ಶೀತಲ ಬ್ಯಾಳಿ, ಗುರುರಾಜ ಕುಲಕರ್ಣಿ, ಸುನಿಲ ಪರ್ವತರಾವ, ರಾಮಚಂದ್ರ ಜೋಶಿ, ಸುಮಿತ ಪಾಟೀಲ, ಕಲಗೌಡಾ ಪಾಟೀಲ, ರಾಜು ಮುನ್ನೋಳ್ಳಿ, ರಾಯಪ್ಪಾ ಡೂಗ, ಪ್ರಜ್ವಲ ನ೮ಲಜಗಿ, ಸಾತಪ್ಪಾ ನಾಯಿಕ, ಸಂಜು ಕಂಠಿ ಸೇರಿದಂತೆ ಹುಕ್ಕೇರಿ, ಸಂಕೇಶ್ವರ ಮತ್ತು ವಿವಿಧ ಗ್ರಾಮಗಳ ರೈತರು, ಮುಖಂಡರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
