ಸಮಾಜ ಸದೃಡವಾಗಲು ಶಿಕ್ಷಕರೆ ಕಾರಣರಾಗುತ್ತಾರೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.
ಡಾ,ಸರ್ವಪಲ್ಲಿ ರಾಧಾಕೃಷ್ಣನ್ ರವರ 138 ನೇ ಜನ್ಮ ದಿನಾಚಾರಣೆ ಪ್ರಯುಕ್ತ ಹುಕ್ಕೇರಿ ತಾಲೂಕಿನ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭವು ತಾಲೂಕಿನ ಬಡಕುಂದ್ರಿ ಹೋಳೆಮ್ಮಾ ದೇವಸ್ಥಾನದ ಆವರಣದಲ್ಲಿ ವಿಬೃಂಜನೆಯಿಂದ ಜರುಗಿತು.


ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಿ ಆರ್ ಮಲ್ಕಾಡದ ದೀಪ ಬೆಳಗಿಸುವ ಮೂಲಕ ಚಾಲನೆ ನಿಡಿದರು.

ಬಿ ಇ ಓ ಪ್ರಭಾವತಿ ಪಾಟೀಲ ಗಣ್ಯರಿಗೆ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿ ರಾಧಾಕೃಷ್ಣನ್ ರವರ ಆದರ್ಶಗಳನ್ನು ದಿನ ನಿತ್ಯ ನಡೆ ನುಡಿ ಆಚಾರ ವಿಚಾರ ಗಳಲ್ಲಿ ಪಾಲಿಸಿ ಮಕ್ಕಳಿಗೂ ಸಹ ತಿಳಿ ಹೇಳಿ ಉತ್ತಮ ಸಮಾಜ ನಿರ್ಮಿಸುವ ಕಾರ್ಯ ಪ್ರತಿ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದರು
ವೇದಿಕೆ ಮೇಲೆ ಚಿಕ್ಕೋಡಿ ಡೈಟ್ ಪ್ರಾಂಶುಪಾಲ ಜೆ ಪಿ ತಂಗಡಿ, ಲೋಕೋಪಯೋಗಿ ಸಚಿವರ ಆಪ್ತ ಕಾರ್ಯದರ್ಶಿ ಜಂಗ್ಲಿಸಾಹೇಬ ನಾಯಕ, ಅವಿನಾಶ ಹೋಳೆಪ್ಪಗೋಳ, ಎ ಎಸ್ ಪದ್ಮನ್ನವರ, ಮಲಗೌಡಾ, ಎಚ್ ಎಲ್ ಪೂಜಾರ ಮತ್ತು ಶಿಕ್ಷಕರ ವಿವಿಧ ಸಂಘಗಳ ಅದ್ಯಕ್ಷರು ಉಪಸ್ಥಿತರಿದ್ದರು.
ನಂತರ 2025 -26 ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯೋಪಾಧ್ಯಾಯ ರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ ಮಹಾಸ್ವಾಮಿಗಳು ಸಮಾಜ ಸದೃಡವಾಗಲು ಶಿಕ್ಷಕರೆ ಕಾರಣ ಆದರೆ ಸಮಾಜ ಕೆಟ್ಟರೂ ಸಹ ಶಿಕ್ಷಕರೆ ಹೋಣೆಗಾರರಾಗುತ್ತಾರೆ ಆದ್ದರಿಂದ ಮಕ್ಕಳಿಗೆ ತಂದೆ,ತಾಯಿ ಹಾಗೂ ಗುರುಗಳ ಮಾರ್ಗದರ್ಶನ ಅವಶ್ಯಕತೆ ಇದೆ ಎಂದರು
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಎಂ ಡಿ ಬಡಿಗೇರ, ಶಿವಾನಂದ ಗುಂಡಾಳೆ, ನಾಗಿನಿಎಲ್ ಕೆ, ಶಿವಾನಂದ ಪಾಟೀಲ ಹಾಗೂ ಸಿ ಆರ ಪಿ, ಶಿಕ್ಷಣ ಸಂಯೋಜಕರು ಹುಕ್ಕೇರಿ ತಾಲೂಕಿನ ವಿವಿಧ ಸರಕಾರಿ, ಖಾಸಗಿ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ನಿವೃತ್ತ ಶಿಕ್ಷಕರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
