Vijaypura

ಬರದ ನಡುವೆ ರಾಜಕೀಯ ಕದನ; ತಾಲೂಕುಗಳ ಘೋಷಣೆಗೆ ಬಿಜೆಪಿ ಆಕ್ರೋಶ

Share

ವಿಜಯಪುರ ಜಿಲ್ಲೆಯಲ್ಲಿ ಬೀಕರ ಬರಗಾಲ ತಾಂಡವವಾಡುತ್ತಿದೆ. ಜಿಲ್ಲೆಯ ಹಲವು ತಾಲ್ಲೂಕುಗಳನ್ನು ಬರಗಾಲ ಪೀಡಿತ ತಾಲ್ಲೂಕು ಗಳಾಗಿ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ ಕೆಲವು ತಾಲ್ಲೂಕು ಕೈ ಬಿಟ್ಟಿದ್ದು ಇದು ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಇತ್ತ ಉಸ್ತುವಾರಿ ಸಚಿವರ ವಿರುದ್ಧ ಬಿಜೆಪಿ ಹರಿಹಾಯುತ್ತಿದೆ. ಸಚಿವರು ಕೇಂದ್ರ ದತ್ತ ಬೆರಳು ಮಾಡಿದ್ದು, ಇದೀಗ ಬಿಜೆಪಿ ಧರಣಿಗೆ ಮುಂದಾಗಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಇತ್ತ ಬೀಕರ ಬರಗಾಲ ಪೀಡಿತ ಜಿಲ್ಲೆ ಎಂದೆ ಖ್ಯಾತಿ ಹೊಂದಿದ ವಿಜಯಪುರ ಜಿಲ್ಲೆಯಲ್ಲಿ ಮತ್ತಷ್ಟು ಹೆಚ್ಚಿನ ಬರಗಾಲ ಆವರಿಸಿದೆ. ರಾಜ್ಯ ಸರ್ಕಾರ ಈಗಾಗಲೇವಿಜಯಪುರ ಜಿಲ್ಲೆಯ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಮುದ್ದೇಬಿಹಾಳ ಸಿಂದಗಿ, ಕಠಿಣ ಆಲಮೇಲ,ದೇವರಹಿಪ್ಪರಗಿ, ಬಸವನ ಬಾಗೇವಾಡಿ, ಬಬಲೇಶ್ವರ, ತಿಕೋಟಾ ತಾಲ್ಲೂಕು ಗಳನ್ನು ಸೇರಿಸಲಾಗಿದೆ. ಇನ್ನೂ ಮೂರು ತಾಲೂಕುಗಳನ್ನು ಕೈ ಬಿಟ್ಟಿರುವದು ಇದೀಗ ಆಕ್ರೋಶ ಕ್ಕೆ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ಸ್ವ ಪಕ್ಷದ ಮುದ್ದೇಬಿಹಾಳ ಶಾಸಕ ಅಪ್ಪಾಜಿ‌ ನಾಡಗೌಡ ತೀವ್ರ ಹರಿಹಾಯ್ದಿದ್ದರು. ಇನ್ನೂ ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ನಡಹಳ್ಳಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಸಚಿವ ಎಂ‌.ಬಿ.ಪಾಟೀಲ ಇದರಲ್ಲಿ ಯಾವುದೇ ರಾಜಕೀಯ, ವಸೀಲಿ ನಡೆಯಲ್ಲ. ಅದು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಆಗುತ್ತದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ರಾಜ್ಯ ಸರ್ಕಾರ, ರೆವ್ಯೂನು ಇಲಾಖೆ ಬರ ಘೋಷಣೆ ಮಾಡುತ್ತದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಮಾಡಲಾಗುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇ ಇರಲ್ಲ. ಮುಂಬರುವ ದಿನಗಳಲ್ಲಿ ನಮ್ಮ ಸರ್ಕಾರದಿಂದ ಬರಗಾಲದ ವಿಚಾರವಾಗಿ ಏನು ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ ಎಂದು ಕೇಂದ್ರ ಸರ್ಕಾರದ ದತ್ತ ಬೆರಳು ಮಾಡಿದ್ದರು‌.

ಇನ್ನೂ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯೆಗೆ ರಾಜ್ಯ ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಕಟುವಾಗಿ ಟೀಕಿಸಿ ಇಡೀ ವಿಜಯಪುರ ಜಿಲ್ಲೆಯನ್ನು ಒಮ್ಮೆಗೆ ತೀವ್ರ ಬರ ಪೀಡಿತ ಎಂದು ಘೋಷಿಸಬಹುದಿತ್ತು. ಆದರೆ, ಒಂದೊಂದೇ ತಾಲ್ಲೂಕನ್ನು ಬರ ಪೀಡಿತ ಎಂದು ಘೋಷಣೆ ಮಾಡುತ್ತಿರುವುದು ಏಕೆ? ತಾಳಿಕೋಟೆ, ಚಡಚಣ, ಇಂಡಿ ತಾಲ್ಲೂಕಗಳನ್ನು ಮೂರು ದಿನಗಳ ಒಳಗಾಗಿ ಬರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಬರ ಘೋಷಣೆಗೆ ಆಗ್ರಹಿಸಿ ಸೆ.21ರಂದು ತಾಳಿಕೋಟೆ ಬಂದ್‌ ನಡೆಸುತ್ತೇವೆ, ಸೆ.22ರಂದು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತೇವೆ, ಸರ್ಕಾರ ಮೂರು ದಿನಗಳ ಬರಗಾಲದ ಅಧಿವೇಶನದಲ್ಲಿ ರೈತ ಪರ ತೀರ್ಮಾನ ಕೈಗೊಳ್ಳದೇ ಇದ್ದರೇ ಸೆ.23 ರಿಂದ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನೂ ನಡಹಳ್ಳಿ ಆಕ್ರೋಶ ದ ನಡುವೆಯೇ ಸಚಿವ ಎಂ.ಬಿ.ಪಾಟೀಲ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದು, ಮಾನದಂಡಗಳನ್ನ ಆಧರಿಸಿ ಇಂಡಿ, ಚಡಚಣ, ತಾಳಿಕೋಟೆ ಬರ ಪೀಡಿತ ತಾಲೂಕು ಎಂದು ಘೋಷಣೆಗೆ ಕ್ರಮ ಕೈಗೊಳ್ಳಲಾಗುವುದು, ಸೋಮವಾರದ ಒಳಗೆ 4 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ಮುಗಿಸಲಾಗುವುದು, ಸರ್ಕಾರದಿಂದ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಸೋಮವಾರದ ಒಳಗೆ ನಾಲ್ಕು ತಾಲೂಕುಗಳ ಈ ಗ್ರೌಂಡ್ ಟ್ರೂಥಿಂಗ್ ಮುಗಿಯಲಿದೆ ಬಳಿಕ ತೀವ್ರ, ಮಧ್ಯಮ ಬರಪೀಡಿತ ತಾಲೂಕುಗಳ ವರ್ಗಿಕರಣವಾಗಲಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಬರ ಘೋಷಣೆ ವಿಚಾರ ವಿಜಯಪುರ ಜಿಲ್ಲೆಯಲ್ಲಿ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದ್ದು, ಸರ್ಕಾರದ ಮುಂದಿನ ಕ್ರಮದತ್ತ ಇದೀಗ ರೈತರು ಹಾಗೂ ರಾಜಕೀಯ ಪಕ್ಷಗಳ ಚಿತ್ತ ನೆಟ್ಟಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!