ಹುಕ್ಕೇರಿ ತಾಲೂಕಿನ ಸಂಕೇಶ್ವರ ಹತ್ತಿರದ ಸೋಲಾಪುರ ಗ್ರಾಮದ ಯೋಧ ನೇಣು ಬ೮ಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

ಭಾರತದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ 33 ವರ್ಷದ ಯೋಧ ಅಣ್ಣಾಸಾಹೇಬ ಶಿವಾಜಿ ಮೊಹಿತೆ ಗಣಪತಿ ಹಬ್ಬಕ್ಕೆ ರಜೆ ಪಡೆದು ತನ್ನ ಸ್ವಂತ ಊರಾದ ಸೋಲಾಪುರ ಗ್ರಾಮಕ್ಕೆ ಆಗಮಿಸಿ ಗಣ೩ಶ ಚತುರ್ಥಿ ಹಬ್ಬದಲ್ಲಿ ಪಾಲ್ಗೊಂಡು ಸಂತೋಷದಿಂದ ಮನೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಎಲ್ಲರೂ ಹಬ್ಬದ ಸಡರಗದಲ್ಲಿ ಇರುವಾಗಿರುವಾಗಲೆ ಅದೆ ರಾತ್ರಿ ಮನೆಯಿಂದ ಹೋರಗೆ ಹೋದ ಅಣ್ಣಾಸಾಹೇಬ ಮರುದಿನ
ಹರಗಾಪುರ ಗುಡ್ಡದ ಸಮೀಪ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹತ್ತಿರ ಇರುವ ನೀಲಗಿರಿ ಗಿಡಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಮೇಲ್ನೋಟಕ್ಕೆ ಇದು ಆತ್ಮ ಹತ್ಯೆ ಎಂದು ಸಂಕೇಶ್ವರ ಪೋಲಿಸ್ ಇನ್ಸಪೇಕ್ಟರ ಗಣಪತಿ ಕೊಗನೊಳ್ಳಿ ಪ್ರಕರಣ ಧಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಆದರೆ ಯೋಧನ ಹೆಂಡತಿ ಸಾವಿತ್ರಿ ನನ್ನ ಗಂಡ ಹೋಟ್ಟೆ ನೂವಿನಿಂದ ಬಳಲುತ್ತಿದ್ದನು ನೋವು ತಾಳಲಾರದೆ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಲಿಸ್ ಠಾಣೆಯಲ್ಲಿ ಹೇಳಿಕೆ ನೀಡಿ ಫಿರ್ಯಾದಿ ನಿಡಿದ್ದರಿಂದ ಸಾರ್ವಜನಿಕರಲ್ಲಿಯ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದೆ.
ಸಾಯಂಕಾಲ ಸೋಲಾಪುರ ಗ್ರಾಮದಲ್ಲಿ ಮರಾಠಾ ಲೆಫ್ಟಿನೆಂಟ್ ಯೋಧರು ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
