ರಾಜ್ಯ ಸರ್ಕಾರದ ಆದೇಶದಂತೆ ವಿದ್ಯುತ್ ಲೋಡ ಶೇಡ್ಡಿಂಗ ಮಾಡಲಾಗುತ್ತಿದೆ ಎಂದು ವಿದ್ಯುತ್ ಸಹಕಾರಿ ಸಂಘದ ನಿರ್ದೆಶಕ ಪೃಥ್ವಿ ಕತ್ತಿ ಹೇಳಿದರು.
ಇತ್ತಿಚಿಗೆ ಹುಕ್ಕೇರಿ ತಾಲೂಕಿನಲ್ಲಿ ವಿದ್ಯುತ್ ಸಹಕಾರಿ ಸಂಘದಿಂದ ಲೋಡ ಶೇಡ್ಡಿಂಗ ಮಾಡುವ ಮುಖಾಂತರ ರೈತರಿಗೆ, ವಿದ್ಯಾರ್ಥಿಗಳಿಗೆ, ವೃದ್ಧರಿಗೆ ಹಾಗೂ ಸಣ್ಣ ಕೈಗಾರಿಕಾ ವಲಯದಲ್ಲಿ ವಿದ್ಯುತ್ ಅಭಾವದಿಂದಾಗುವ ತೊಂದರೆ ಕುರಿತು ಹುಕ್ಕೇರಿ ಗ್ರಾಮಿಣ ವಿದ್ಯುತ್ ಸಹಕಾರಿ ಸಂಘದ ನಿರ್ದೆಶಕರು ಪತ್ರಿಕಾಗೋಷ್ಟಿ ಮಾಡುವ ಮೂಲಕ ಜನರಿಗೆ ವಿದ್ಯುತ್ ಸರಬರಾಜು ಮಾಡುವಲ್ಲಿ ಇರುವ ಅನಾನಕೂಲತೆ ಬಗ್ಗೆ ಮಾಹಿತಿ ನೀಡಿದರು.

ಮಾದ್ಯಮಗಳೊಂದಿಗೆ ಮಾತನಾಡಿದ ಸಂಘದ ನಿರ್ದೆಶಕ ಪೃಥ್ವಿ ಕತ್ತಿ ರಾಜ್ಯದಲ್ಲಿ ಮಳೆ ಅಭಾವದಿಂದ ವಿದ್ಯುತ್ ಉತ್ಪಾದನೆಯಲ್ಲಿ ಕೊರತೆ ಕಂಡು ಬಂದ ಹಿನ್ನಲೆಯಲ್ಲಿ ಸರ್ಕಾರ ನಮಗೆ ನೀಡಿದ ಆದೇಶದಂತೆ ನಾವು ಲೋಡ ಶೆಡ್ಡಿಂಗ ಮಾಡಬೇಕಾದ ಅನಿವಾರ್ಯತೆ ಬಂದಿದೆ ಕಾರಣ ಹುಕ್ಕೇರಿ ತಾಲೂಕಿನ ಜನತೆ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಜೋತೆ ಸಹಕರಿಸ ಬೇಕು , ಈ ಕುರಿತು ನಾವು ಸರ್ಕಾರಕ್ಕೆ ಹೆಚ್ಚಿನ ವಿದ್ಯುತ್ ನೀಡುವಂತೆ ಮನವಿ ಸಲ್ಲಿಸಲು ಕ್ರಮ ಜರಗಿಸುತ್ತೆವೆ ಎಂದರು
ಸಂಘದ ಅದ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ ರಾಜ್ಯದಲ್ಲಿ ಸಹಕಾರ ತತ್ವದಡಿಯಲ್ಲಿ ಕಾರ್ಯ ನಿರ್ವಹಿಸುವ ಏಕೈಕ ವಿದ್ಯುತ್ ಸಹಕಾರಿ ಸಂಘಕ್ಕೆ ಹೇಚ್ಚಿನ ವಿದ್ಯುತ್ ನಿಡುವಂತೆ ಆಗ್ರಹಿಸಿ ಇಂಧನ ಸಚಿವ ಜಾರ್ಜ ಫರ್ನಾಂಡೀಸ್ ರವರಿಗೆ ಶೀಘ್ರದಲ್ಲೇ ಮನವಿ ಸಲ್ಲಿಸಿ ಜನರಿಗೆ ಆಗುವ ತೊಂದರೆಯನ್ನು ಸರಿ ಪಡಿಸಲಾಗುವದು ಎಂದರು
ಈ ಸಂದರ್ಭದಲ್ಲಿ ನಿರ್ದೆಶಕರಾದ ವಿನಯ ಪಾಟೀಲ, ಗಜಾನನ ಕ್ವಳ್ಳಿ, ಶಿವಾನಂದ ಮುಡಸಿ, ಲಾಜಮ ನಾಯಿಕವಾಡಿ, ಸ್ಥಾನಿಕ ಅಭಿಯಂತರ ನೇಮಿನಾಥ ಸೊಲ್ಲಾಪುರೆ, ಉದಯ ಮಗದುಮ್ಮ, ಮಂಜುನಾಥ ಕುದನೂರಿ ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
