ಹುಕ್ಕೇರಿ ನಗರದಲ್ಲಿ ಕಳೆದ ಒಂದು ವಾರದಲ್ಲಿ ವಿವಿಧ ದರ್ಗಾಗಳಲ್ಲಿ ಹಿಂದೂ ಮುಸ್ಲಿಂ ಬಾಂಧವರು ವಿಜೃಂಭಣೆಯಿಂದ ಉರುಸ್ ಆಚರಿಸಿದರು.


ಪಟ್ಟಣದ ಮಾಸಾಬಿ ದರ್ಗಾ ಗಜಬರವಾಡಿಯ ಗಂಜುಲ ಬಾಹರ ದರ್ಗಾ ಜಾನಕಾಸಾಬ್ ಮತ್ತು ಜಾಂಗೀರಸಾಬ್ ಹಾಗೂ ಕರಿಂ ಸಾಬ್, ಪೀರ ಪನ್ನಾ,ದಾದಾ ಕಲಾಮಿ ದರ್ಗಾಗಳಲ್ಲಿ ವಿಷೇಶ ಪ್ರಾರ್ಥನೆ ಮಾಡಿ ನೈವೇದ್ಯ ಮತ್ತು ಮಹಾ ಪ್ರಸಾದ ಮಾಡುವ ಮೂಲಕ ಅದ್ದೂರಿಯಾಗಿ ಉರುಸ್ ಆಚರಿಸಲಾಯಿತು .ಗಜಬರವಾಡಿ ಗಂಜುಲ ಬಾಹರ ದರ್ಗಾ ಸುಮಾರು ಆರನೂರು ವರ್ಷಗಳ ಇತಿಹಾಸ ವಿರುವ ಬೃಹತ್ ಆಕಾರದ ಪೀರ ಸಯ್ಯದ ಹಮಿದುದೀನ್ ಗಂಜುಲ ಬಹಾರ ದರ್ಗಾ ಮತ್ತು ಮಾಸಾಭಿ ದರ್ಗಾಗಳಿಗೆ ವಿಷೇಶ ದೀಪಾಲಂಕಾರ ಮಾಡಲಾಗಿತ್ತು.
ಬೆಳಗಿನ ಜಾವ ಹನ್ನೊಂದು ಜಮಾತ ಸದಸ್ಯರು ಸಾಮೂಹಿಕ ಸಂದಲ್ ಜರುಗಿಸಿ ಪ್ರಾರ್ಥನೆ ಮಾಡಿದರು.
ಸಾಯಂಕಾಲ ಯುವಕರು ಡಿ ಜೆ ಹಾಡಿಗೆ ತಾಳ ಹಾಕಿ ನಗರದಲ್ಲಿ ಮೆರವಣೆಗೆ ಮಾಡುವ ಮೂಲಕ ಗಲೀಫ್ ಏರಿಸಿದರು.
ಐದು ದಿನಗಳ ವರಗೆ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಸಾವಿರಾರು ಜನ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆ , ನೈವೇದ್ಯ, ನೀಡುತ್ತಾರೆ. ರಾತ್ರಿ ಜಗಮಗಿಸುವ ವಿದ್ಯುತ್ ಅಲಂಕಾರ ದಿಂದ ಕಂಗೋಳಿಸಿದ ದರ್ಗಾದಲ್ಲಿ ಪ್ರಸಿದ್ಧ ಕಲಾವಿದರಿಂದ ಕವ್ವಾಲಿ ಕಾರ್ಯಕ್ರಮ ಜರುಗಿದವು,ಜನತೆ ಕವ್ವಾಲಿ ಕಲಾವಿದರಿಗೆ ಹಣದ ಸುರಿಮಳೆ ಹರಿಸಿ ಪ್ರೋತ್ಸಾಹ ನೀಡಿದರು .
ಉರುಸ್ ಕಾರ್ಯಕ್ರಮಗಳಲ್ಲಿ ಶಾಸಕ ನಿಖಿಲ್ ಕತ್ತಿ, ಮಾಜಿ ಸಂಸದ ರಮೇಶ ಕತ್ತಿ ,ವಿದ್ಯುತ್ ಸಹಕಾರಿ ಸಂಘದ ಅದ್ಯಕ್ಷ ಮಹಾವೀರ ನಿಲಜಗಿ ಸೇರಿದಂತೆ ರಾಜಕೀಯ ಮುಖಂಡರು ಭೇಟಿ ನೀಡಿ ಆಶಿರ್ವಾದ ಪಡೆದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಡಾ,ಜಾಫರ ಅಲಿ ಹುಕ್ಕೇರಿ ನಗರದಲ್ಲಿ ನಡೆಯುತ್ತಿರುವ ಉರುಸ್ ಕಾರ್ಯಕ್ರಮಗಳು ಅತಿ ವಿಬೃಂಜನೆಯಿಂದ ಜರಗುತ್ತಿವೆ ಬೇರೆ ಸ್ಥಳಗಳಿಂದ ಆಗಮಿಸಿದ ಭಕ್ತರಿಗೆ ಇಲ್ಲಿ ಕಮೀಟಿ ಸದಸ್ಯರು ಸಕಲ ಸೌಲಭ್ಯಗಳನ್ನು ಒದಗಿಸಿ ಉತ್ಸಾಹದಿಂದ ಆಚರಿಸುತ್ತಿದ್ದಾರೆ ಎಂದರು

ಗುಲಾಬ ಶಾ ಟೆಕ್ಕೆಯ ಪೀರ ಬಾಬಾಸಾಹೇಬ ದರ್ಗಾದಲ್ಲಿ ಮೌಲಾನಾಗಳು ವಿಷೇಶ ಪ್ರಾರ್ಥನೆ ಮಾಡಿದರು.
ಹನ್ನೊಂದು ಜಮಾತ ಅದ್ಯಕ್ಷ ಸಲಿಂ ನದಾಫ್ ಮಾತನಾಡಿ ಹುಕ್ಕೇರಿ ನಗರದಲ್ಲಿ ಜರಗುವ ಉರುಸ್ ಗಳನ್ನು ಹಿಂದೂ ಮುಸ್ಲಿಂ ಬಾಂಧವರು ಸೌಹಾರ್ದತೆ ಮತ್ತು ಭಕ್ತಿ ಭಾವದಿಂದ ಆಚರಿಸುತ್ತೆವೆ ಎಂದರು

ಈ ಸಂದರ್ಭದಲ್ಲಿ ನಗರದ ಹನ್ನೊಂದು ಜಮಾತ ಸದಸ್ಯರು ಸೇರಿದಂತೆ ವಿವಿಧ ಕಮೀಟಿ ಸದಸ್ಯರಾದ ಮಲ್ಲಿಕ್ ಮುಜಾವರ, ಸಲಿಂ ಕಳಾವಂತ, ರಾಜು ಮುಜಾವರ, ಆಲಂ ಮಕಾನದಾರ, ಮೈನುದ್ದಿನ್ ಮುಜಾವರ, ಮೋಶೀನ ಮುಜಾವರ , ಮುಸ್ತಾಕ ಮುಜಾವರ, ಅಕೀಲ ಮಕಾನದಾರ, ಹನೀಫ ಮುಲ್ಲಾ,ಜಾಂಗೀರ ಮುಜಾವರ,ಡಾ, ಕುತುಬ್ ಮಕಾನದಾರ, ಶೋಯೆಬ್ ಮುಜಾವರ ,ಅಂಜುಮ, ಮೇಹಬೂಬ,ದಿಲ್ ಪುಕಾರ ಮುಜಾವರ ಸೇರಿದಂತೆ ಹಲವಾರು ಹಿಂದೂ ಮುಸ್ಲಿಂ ಬಾಧವರು ಹಾಜರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ..
