ಬೆಳಗಾವಿಯ ಯು ಕೆ 27 ಹೋಟೆಲ್ ವತಿಯಿಂದ ಸಂಕೇಶ್ವರ ಸಾರ್ವಜನಿಕ ಆಸ್ಪತ್ರೆಗೆ ನೂತನ ಅಂಬುಲೇನ್ಸ ವಿತರಿಸಿದ ಶಾಸಕ ನಿಖಿಲ್ ಕತ್ತಿ.
ದಿವಂಗತ ಉಮೇಶ ಕತ್ತಿ ಯವರ ಆರನೇ ಪುಣ್ಯ ಸ್ಮರಣೆ ನಿಮತ್ಯ ಶಾಸಕ ನಿಖಿಲ್ ಕತ್ತಿ ಬೆಲ್ಲದ ಬಾಗೆವಾಡಿಯಲ್ಲಿ ಉಮೇಶ ಕತ್ತಿಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು ನಂತರ ಸಂಕೇಶ್ವರ ಸಾರ್ವಜನಿಕ ಆಸ್ಪತ್ರೆಗೆ ತೇರಳಿ ಕತ್ತಿ ಒಡೆತನದಲ್ಲಿರುವ ಬೆಳಗಾವಿಯ ಯು ಕೆ 27 ವತಿಯಿಂದ ಉಚಿತವಾಗಿ ನೂತನ ಅಂಬುಲೇನ್ಸ ವಾಹನ ಹಸ್ತಾಂತರಿಸಿದರು .



ನಂತರ ನಡೆದ ಸಮಾರಂಭದಲ್ಲಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಶ್ರೀಮತಿ ಪೂರ್ಣಿಮಾ ತಲ್ಲೂರ ಶಾಸಕರಿಗೆ ಹೂ ಗುಚ್ಚ ನಿಡಿ ಅಭಿನಂದಿಸಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ, ಡಾ, ದತ್ತಾತ್ರಯ್ಯ ದೊಡಮನಿ, ಡಾ, ಇಲೆಯ ರೆಡ್ಡಿ, ಡಾ, ವಿಶಾಲ ಸುತಾರ, ಮುಖಂಡರಾದ ಗಜಾನನ ಕೋಳ್ಳಿ, ಸುನಿಲ ಪರ್ವತರಾವ, ನಂದು ಮುಡಶಿ, ರೋಹಣ ನೇಸರಗಿ, ಸುಭಾಷ ಮೊದಲಾದವರು ಉಪಸ್ಥಿತರಿದ್ದರು.


ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
