Hukkeri

ಹುಕ್ಕೇರಿ : ರಕ್ತದಾನ ಮಾಡಿ ಶಿಕ್ಷಕರಿಗೆ ಗೌರವ ಸಲ್ಲಿಸುವ ಕಾರ್ಯ – ಡಾ, ಉದಯ ಕುಡಚಿ

Share

ಶಿಕ್ಷಕರ ದಿನಾಚಾರಣೆ ಅಂಗವಾಗಿ ರಕ್ತ ದಾನ ಮಾಡುವ ಮೂಲಕ ನಿಜವಾದ ಗೌರವ ಸಲ್ಲಿಸುವ ಕಾರ್ಯ ಮಾಡಲಾಗುತ್ತುದೆ ಎಂದು ಹುಕ್ಕೇರಿ ತಾಲೂಕಾ ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ ಹೇಳಿದರು.

ಶಿಕ್ಷಕರ ದಿನಾಚಾರಣೆ ಅಂಗವಾಗಿ ವಿವಿಧ ಇಲಾಖೆ ಸಹಯೋಗದೊಂದಿಗೆ ಹುಕ್ಕೇರಿ ತಾಲೂಕಿನ ಯಮಕನಮರ್ಡಿ, ಸಂಕೇಶ್ವರ ಮತ್ತು ಹುಕ್ಕೇರಿ ನಗರಗಳಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಸಂಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಖ್ಯ ವೈದ್ಯಾಧಿಕಾರಿ ಶ್ರೀಮತಿ ಪೂರ್ಣಿಮಾ ತಲ್ಲೂರ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಹುಕ್ಕೇರಿ ತಾಲೂಕಿನಲ್ಲಿ ಸುಮಾರು 17 ನೂರು ಜನ ಸ್ವಯಂ ಪ್ರೇರಿತರಾಗಿ ರಕ್ತ ನೀಡಲು ನೊಂದಣಿ ಮಾಡಿಸಿದ್ದಾರೆ ಅದರಂತೆ ಬೆಳಗಿನ ಜಾವದಿಂದಲೆ ಹುಕ್ಕೇರಿ ನಗರದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ,ಯಮಕನಮರ್ಡಿ ಮತ್ತು ಸಂಕೇಶ್ವರಗಳ ಆರೋಗ್ಯ ಕೇಂದ್ರದಲ್ಲಿ ಸರದಿ ಸಾಲಿನ ಪ್ರಕಾರ ರಕ್ತ ದಾನ ಮಾಡುತ್ತಿದ್ದಾರೆ.
ಸಂಕೇಶ್ವರ ಶ೮ಬಿರದಲ್ಲಿ ರಕ್ತ ನಿಡಿದ ಮಹನಿಯರಿಗೆ ಶಿಕ್ಷಕರ ಸಂಘದಿಂದ ಹಣ್ಣು ಹಂಪಲ ನೀಡಲಾಯಿತು.
ಹುಕ್ಕೇರಿ ತಾಲೂಕಾ ಪಂಚಾಯತ ಸಭಾ ಭವನಕ್ಕೆ ತಹಸಿಲ್ದಾರ ಬಲರಾಮ ಕಟ್ಟಿಮನಿ ಭೇಟಿ ನೀಡಿ ವ್ಯವಸ್ಥೆ ಯನ್ನು ಪರಿಶಿಲಿಸಿ ರಕ್ತ ನೀಡಿದವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸಂಕೇಶ್ವರ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಶ್ರೀಮತಿ ಪೂರ್ಣಿಮಾ ತಲ್ಲೂರ ಬೆಳಗಾವಿ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ಶಿಕ್ಷಕರ ದಿನಾಚಾರಣೆ ನಿಮಿತ್ಯ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ರಕ್ತದಾನ ಶಿಬಿರ ಹಮ್ಮಿಕೋಳ್ಳಲಾಗಿದೆ ಶಿಬಿರಕ್ಕೆ ಬೇಕಾಗುವ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು

ತಾಲೂಕಾ ಒಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ ನೇತೃತ್ವದಲ್ಲಿ ಹುಕ್ಕೇರಿ ತಾಲೂಕಿನ ಮೂರು ಕೇಂದ್ರದಲ್ಲಿ ಅಚ್ಚು ಕಟ್ಟಾದ ವ್ಯವಸ್ಥೆ ಯೊಂದಿಗೆ ಬೆಳಗಾವಿಯ ಕೆ ಎಲ್ ಇ ಮತ್ತು ಬೀಮ್ಸ ಆಸ್ಪತ್ರೆಯ ಸಿಬ್ಬಂದಿಗಳು ಸುಮಾರು 600 ಯೂನಿಟ್ ರಕ್ತ ಪಡೆದುಕೊಂಡರು.
ತಾಲೂಕಾ ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ ಮಾತನಾಡಿ ಶಿಕ್ಷಕರ ದಿನಾಚಾರಣೆ ಅಂಗವಾಗಿ ಗುರುವಿಗೆ ನಮನ ಸಲ್ಲಿಸುವ ಉದ್ದೇಶದಿಂದ ಇಂದು ಜಿಲ್ಲಾದ್ಯಾಂತ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಹುಕ್ಕೇರಿ ತಾಲೂಕಾ ಆಡಳಿತ ಮತ್ತು ತಾಲೂಕಾ ಪಂಚಾಯತ ಇಲಾಖೆಗಳ ಸಹಯೊಗದಲ್ಲಿ ಶಿಬಿರ ಸಮರೋಪಾದಿಯಲ್ಲಿ ಜರುಗಿದೆ ,ಅದರಂತೆ ರಕ್ತದಾನ ಮಾಡಿದ ಮಹನಿಯರಿಗೆ ಅಭಿನಂದನೆ ಹೇಳಿದರು

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅದ್ಯಕ್ಷ ಶಾನೂಲ ತಹಸಿಲ್ದಾರ,ಆರೋಗ್ಯ ಇಲಾಖೆ ನಾಮ ನಿದರ್ಶನಗಳಲ್ಲಿ ಸಿತ ಸದಸ್ಯ ಭೀಮಗೌಡಾ ಅಮ್ಮಣಗಿ, ಪುರಸಭೆ ಮುಖ್ಯಾಧಿಕಾರಿ ಮಠದ,ಆರ ಜಿ ಡಾಂಗೆ, ಡಾ,ಚೇತನ ಕಂಕಣವಾಡಿ,ಡಾ, ದತ್ತಾತ್ರಯ ದೊಡಮನಿ,ಡಾ, ಬಾಬಾಸಾಹೇಬ ಪಾಟೀಲ, ಪ್ರಣಯ ಕೋಲಕಾರ,ಡಾ, ಪ್ರತಿಭಾ, ಎ ಸಿ ಪದ್ಮಣ್ಣವರ ,ಪ್ರವೀನ ಎನ್ ಸಿ ಆರ್ ಪಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!