Hukkeri

ಹುಕ್ಕೇರಿ : ಪ್ರಜಾಸೇವೆ ಅಭಿಯಾನದ ಲಾಭ ಪಡೆದುಕೋಳ್ಳಿ – ಶಾಸಕ ನಿಖಿಲ್ ಕತ್ತಿ.

Share

ಹುಕ್ಕೇರಿ ಮತಕ್ಷೇತ್ರದ ಜನತೆ ಕರ್ನಾಟಕ ಸರ್ಕಾರದ ಪ್ರಜಾಸೇವೆ ಅಭಿಯಾನದ ಲಾಭ ಪಡೆದುಕೋಳ್ಳ ಬೇಕು ಎಂದು ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಹೇಳಿದರು.

ಕರ್ನಾಟಕ ಸರ್ಕಾರದ ಪ್ರಜಾಸೇವೆ ಅಭಿಯಾನ ಕಾರ್ಯಕ್ರಮವನ್ನು ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಎ ಪಿ ಎಂ ಸಿ ಆವರಣದಲ್ಲಿ ಶಾಸಕ ನಿಖಿಲ್ ಕತ್ತಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಹತ್ತು ಹಲವಾರು ಇಲಾಖೆಗಳ ವಳಗೊಂಡ ಪ್ರಜಾಸೇವೆ ಇಲಾಖೆ ಮೂಲಕ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳು ಪ್ರತಿ ಗ್ರಾಮ ಮಟ್ಟದ ವ್ಯಕ್ತಿಗಳಿಗೆ ಮುಟ್ಟಿಸುವ ಕಾರ್ಯ ಜರುಗಲು ಕಂದಾಯ ಮತ್ತು ಪಂಚಾಯತ್ ರಾಜ್ಯ ಇಲಾಖೆಗಳ ಮೂಲಕ ಸಾರ್ವಜನಿಕರಿಂದ ಸಮಸ್ಯೆ, ಅಹವಾಲು,ಕುಂದು ಕೋರತೆ ಸ್ವೀಕರಿಸಲಾಯಿತು.

ವೇದಿಕೆ ಮೇಲೆ ತಹಸಿಲ್ದಾರ ಬಲರಾಮ ಕಟ್ಟಿಮನಿ, ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ, ಅಭಿಯಂತರ ರವೀಂದ್ರ ಗಡಾದ, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಮಹಾದೇವ ಪಟಗುಂದಿ, ಸಮಾಜ ಕಲ್ಯಾಣ ಅಧಿಕಾರಿ ಗುರುಶಾಂತ ಪಾವಟೆ, ವಿದ್ಯುತ್ ಇಲಾಖೆ ಅಭಿಯಂತರ ನೇಮಿನಾಥ ಖೆಮಲಾಪುರೆ, ಲೋಕೋಪಯೋಗಿ ಅಭಿಯಂತರ ಪ್ರವೀಣ ಮಾಡ್ಯಾಳ , ಬಿ ಇ ಓ ಪ್ರಭಾವತಿ ಪಾಟೀಲ, ಭೂ ಧಾಖಲೆಗಳ ಅಧಿಕಾರಿ ಟಿ ಎಂ ಡಾಂಗೆ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎ ಎಸ್ ಪದ್ಮಣ್ಣವರ, ಪಶು ಇಲಾಖೆ ಅಧಿಕಾರಿ ರಾಜು ಮೇತ್ರಿ, ಸಿ ಆರ್ ಪಿ ಎಂ ಎಸ್ ಪೂಜಾರ ಉಪಸ್ಥಿತರಿದ್ದರು.
ಶಾಸಕ ನಿಖಿಲ್ ಕತ್ತಿ ಮಾತನಾಡಿ ಸರ್ಕಾರ ಪ್ರಜಾಸೇವೆ ಅಭಿಯಾನ ಮೂಲಕ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಅದಕ್ಕೆ ಸೂಕ್ತ ಪರಿಹಾರ ನೀಡುವ ಕಾಯಿಲೆ ಕ್ರಮವನ್ನು ನಾನು ವಿರೋಧ ಪಕ್ಷದಲ್ಲಿದ್ದರು ಸ್ವಾಗತಿಸುತ್ತೆನೆ ಕಾರಣ ಒಳ್ಳೆಯ ಕೆಲಸಕ್ಕೆ ನಾನು ಬೆಂಬಲಿಸುತ್ತೆನೆ, ಈ ಪ್ರಜಾಸೇವೆ ಅಭಿಯಾನದ ಮೂಲಕ ಕ್ಷೇತ್ರದ ಜನತೆ ಲಾಭ ಪಡೆದುಕೊಳ್ಳ ಬೇಕು ಎಂದರು

ನಂತರ ಸಾರ್ವಜನಿಕ ರಿಂದ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಮನವಿ ಸ್ವೀಕರಿಸಲಾಯತು.
ಈ ಸಂದರ್ಭದಲ್ಲಿ ಹುಕ್ಕೇರಿ ಮತ ಕ್ಷೇತ್ರದ ಜನತೆ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!