Belagavi

ಗಣೇಶೋತ್ಸವ : ಸಾರ್ವಜನಿಕರು ಜಾಗೃತಿ ವಹಿಸಿ – ಮೇಯರ್, ಉಪಮೇಯರ್.:

Share

ಗಣೇಶ ಉತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸುವ
ಮಹಾನಗರದ ಜನತೆಯು ಯಾವುದೇ ರೀತಿಯ ತೊಂದರೆಗಳಾಗದಂತೆ ಮುಂಜಾಗ್ರತೆ ವಹಿಸಬೇಕೆಂದು ಮಹಾನಗರ ಪಾಲಿಕೆಯ ಮೇಯರ್ ಪ್ರೀತಿ ಕಾಮಕರ್
ಕೋರಿದರು.


ನಗರಸೇವಕರು ಹಾಗೂ ಆಡಳಿತ ವ್ಯವಸ್ಥೆಯ ಪ್ರತಿನಿಧಿಯಾಗಿ ಪಾಲಿಕೆಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ
ಎಲ್ಲರಿಗೂ ಶುಭಾಶಯ ಕೋರಿ ಮಾತನಾಡಿದ ಅವರು, ಉತ್ತಮ ಮಳೆ ಬೆಳೆಯಾಗಿ ಜನತೆಗೆ ಸುಖ ಶಾಂತಿ ಸಮೃದ್ಧಿ ನೀಡಲಿ ಎಂದು ವಿಘ್ನೇಶ್ವರನಲ್ಲಿ ಸಂಕಲ್ಪ ಮಾಡಿ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ
ಉಪ ಮಹಾಪೌರ ಹನುಮಂತ ಕೊಂಗಾಲಿಯವರು, ಹಬ್ಬದ ಮುಂಚಿತವಾಗಿ ಹಲವಾರು ಬಾರಿ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಹಾಗೂ ಉತ್ಸವ ಮಂಡಳಿಗಳ ಪದಾಧಿಕಾರಿಗಳ ಜೊತೆಗೆ
ಸಭೆ ಮಾಡಲಾಗಿದೆ. ಆ ಸಭೆಗಳ ರೂಪುರೇಷೆಗಳಂತೆ
ಗಣೇಶ ಉತ್ಸವವನ್ನು ಶಿಸ್ತಿನಿಂದ ಜರುಗಿಸಲು
ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಳಗಾವಿ ಗಣೇಶೋತ್ಸವ ರಾಜ್ಯಕ್ಕೇ ಮಾದರಿಯಾಗಿದ್ದು, ಎಲ್ಲರೂ ಶ್ರದ್ದಾ ಭಕ್ತಿ ಸಂತಸದಿಂದ
ಪಾಲ್ಗೊಳ್ಳ ಬೇಕೆಂದು ಕೋರಿದರು.
ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ. ಆಡಳಿತ ಪಕ್ಷದ ನಾಯಕ ಸಂತೋಷ
ಪೇಡ್ನೇಕರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಶ್ರೇಯಸ್ ನಾಕಾಡಿ,ರಮೇಶ ಮೈಲುಗೋಳ, ರಾಜು ಭಾತಕಾಂಡೆ, ಸಾರಿಕಾ ಪಾಟೀಲ ಹಾಗೂ ನಗರಸೇವಕರು,
ಸಿಬ್ಬಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

Tags:

error: Content is protected !!