ಖಾನಾಪೂರ ತಾಲೂಕಿನ ಐತಿಹಾಸಿಕ ನಂದಗಡದ ಗವಳಿವಾಡಾ ರಸ್ತೆ ಅಭಿವೃದ್ಧಿಗೆಂದು ಶಾಸಕರು 25 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರು. ಆದರೆ, ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಯು ಹದಗೆಟ್ಟು ಹೋಗಿದ್ದು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಪರದಾಡುವಂತಾಗಿದೆ. ಈ ಕಳಪೆ ಕಾಮಗಾರಿಯ ಹೊಣೆಯನ್ನು ಹೊರುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.


-ಖಾನಾಪೂರ ತಾಲೂಕಿನ ಐತಿಹಾಸಿಕ ನಂದಗಡ ಗ್ರಾಮದ ಗವಳಿವಾಡಾ ರಸ್ತೆಯ ಪರಿಸ್ಥಿತಿ ನೋಡಿ ಅಯ್ಯೋ ದೇವರೆ ಎನ್ನಪ್ಪ ಇದು ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು ಇದಕ್ಕೆ ಶಾಸಕ ವಿಠ್ಠಲ ಹಲಗೇಕರ ಅವರು ಈ ರಸ್ತೆ ಸುವ್ಯವಸ್ಥಿತವಾಗಿ ಮಾಡಿ ಗವಳಿ ಜನರಿಗೆ ರೈತರಿಗೆ ನೀಡಬೇಕೆಂಬ ಉದ್ದೇಶದಿಂದ ಅಲ್ಲಿ 25 ಲಕ್ಷ ರೂಪಾಯಿ ಅನುದಾನವನ್ನು ಮಂಜೂರು ಮಾಡಿದರು ಅದಕ್ಕೆ ತಕ್ಕಂತೆ ಮಾನ್ಯ ಶಾಸಕರು ಅದರಂತೆಯೇ ಸೇರಿದಂತೆ ಇನ್ನಿತರರು ಭರ್ಜರಿಯಾಗಿ ರಸ್ತೆ ಪೂಜೆ ಸಲ್ಲಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು ಈ ರಸ್ತೆ ಕೆಲಸ ಮಾಡುವ ಪುಣ್ಯಾತ್ಮ ಗುತ್ತಿಗೆದಾರರು ಮಾತ್ರ 25 ಲಕ್ಷ ರೂಪಾಯಿ ಅನುದಾನದ ಕೆಲಸ ಮಾಡಿದ್ದು ಎಲ್ಲರೂ ಅವರಿಗೆ ಶಹಬ್ಬಾಸ್ ಗಿರಿ ನೀಡುವಂತಹದ್ದು ಚಿಕ್ಕ ಚಿಕ್ಕ ಮಕ್ಕಳು ಶಾಲೆಗೆ ಹೋಗಿ ಬರಲು ಅನಾನುಕೂಲ ಮಾಡಿಕೊಟ್ಟ ಆ ಮಹಾನ್ ಗುತ್ತಿಗೆದಾರನ ಕೆಲಸ ಈ ವಿಡಿಯೋ ಮೂಲಕ ಕಾಣಲು ದೊರೆಯುತ್ತದೆ ಶಾಲಾ ಮಕ್ಕಳು ಹರಸಾಹಸ ಮಾಡಿಕೊಂಡು ಈ ರಸ್ತೆಯ ಮೇಲೆ ಸಾಗಬೇಕು ಮೊದಲು ಇದ್ದ ರಸ್ತೆ ಪರಿಸ್ಥಿತಿ ಬೇಕು ಆದರೆ 25 ಲಕ್ಷ ರೂಪಾಯಿ ಅನುದಾನದ ಈ ರಸ್ತೆ ಯಾರಿಗೆ,ಯಾವ ಪುರುಷಾರ್ಥಕ್ಕೆ? ಇಂತಹಾ ಮಹಾನ್ ಗುತ್ತಿಗೆದಾರರಿಗೆ ಸತ್ಕರಿಸಿಬೇಕು ಅಲ್ವಾ ಎಂದು ಜನಸಾಮಾನ್ಯರು ಚರ್ಚಿಸುತ್ತಾರೆ ಈ 25 ಲಕ್ಷ ರೂಪಾಯಿ ಅನುದಾನದ ಯೋಜನೆಯ ಬಗ್ಗೆ ತಾಲೂಕಾ ಮಟ್ಟದ ಅಧಿಕಾರಿಗಳು , ಜಿಲ್ಲಾ ಮಟ್ಟದ ಅಧಿಕಾರಿಗಳು ಇದಕ್ಕೆ ಮೊದಲು ಖುದ್ದಾಗಿ ಶಾಸಕರು ತಮ್ಮ ಅನುದಾನದ ರಸ್ತೆಯ ಪರಿಸ್ಥಿತಿ ಏನಾಗಿದೆ ಎಂದು ತಿಳಿದುಕೊಂಡು ಯೋಗ್ಯ ರೀತಿಯ ಕ್ರಮ ಕೈಗೊಳ್ಳಬೇಕು ಶಾಸಕರ ನಿಧಿಯಿಂದ ಅನುದಾನ ಮಂಜೂರಾತಿ ಆದರೆ ಇದಕ್ಕೆ ಸಂಬಂಧಿಸಿದಂತೆ ಇದಕ್ಕೆ ತಾಂತ್ರಿಕ ಮಂಜೂರಾತಿ ನೀಡಿದ ಇಂಜಿನಿಯರ್ ಹೇಗೆ ನೋಡಿ ಹಣ ಬಿಡುಗಡೆ ಮಾಡಿದರು ಶಾಸಕರ ನಿಧಿ ಪರಿಶೀಲನೆ ಮಾಡುವ ಯಾವ ಇಲಾಖೆ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ಈ 25 ಲಕ್ಷ ಅನುದಾನ ಯೋಜನೆ ಪರಿಶೀಲನೆ ಪರಿಶೀಲನೆ ಮಾಡದೇ ಪೈಲ್ ಮುಂಜುರಾತಿ ಮಾಡಿದರು ಇದು ಸಾರ್ವಜನಿಕರಿಗೆ ಮಾಹಿತಿ ಸಿಗಬೇಕು ಇದರ ಬಗ್ಗೆ ಯೋಗ್ಯ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗುತ್ತಿದೆ. ಅಲ್ತಾಫ್ ಬಸರಿಕಟ್ಟಿ , ಇನ್ ನ್ಯೂಸ್ , ನಂದಗಢ
