Khanapur

ರೈತನಿಗೆ ಟ್ರ್ಯಾಕ್ಟರ್ ವಿತರಣೆ ಮಾಡಿದ ಶಾಸಕ ವಿಠ್ಠಲ ಹಲಗೇಕರ

Share

ರಾಷ್ಟ್ರೀಯ ತೋಟಗಾರಿಕೆ ಮಿಷನ್ (National Horticulture Mission) ಯೋಜನೆಯಡಿಯಲ್ಲಿ ಖಾನಾಪೂರ ತಾಲೂಕಿನ ಕರಿಕಟ್ಟಿ ಗ್ರಾಮದ ಫಲಾನುಭವಿ ರೈತರಾದ ನಾಗಪ್ಪ ಮಾ. ಅರಳಗುಂಡಿ ಅವರಿಗೆ ಮಂಜೂರಾದ ನೂತನ ಮಹೀಂದ್ರಾ ಟ್ರ್ಯಾಕ್ಟರ್‌ಗೆ (Mahindra 2121 OJA) ಪೂಜೆ ಸಲ್ಲಿಸಿ, ಶಾಸಕ ವಿಠ್ಠಲ ಹಲಗೇಕರ ಅವರು ಉದ್ಘಾಟಿಸಿ ವಿತರಣೆ ಮಾಡಿದರು

ಈ ಸಂದರ್ಭದಲ್ಲಿ ಸಂಬಂಧಪಟ್ಟ ಫಲಾನುಭವಿ ರೈತನಿಗೆ ಕೀಲಿಕೈ (ಚಾವಿ) ಹಸ್ತಾಂತರಿಸಿ, ಅವರ ಮುಂದಿನ ಕೃಷಿ ಜೀವನಕ್ಕೆ ಮತ್ತು ಉಜ್ವಲ ಭವಿಷ್ಯಕ್ಕೆ ಹೃತ್ಪೂರ್ವಕ ಶುಭ ಹಾರೈಸಲಾಯಿತು ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಬಹುಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!