ಮಾಜಿ ಸಚಿವ ಹಾಗೂ ಧಾರವಾಡ ಹಾಲಿ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಗೆ ಬಿಜೆಪಿ ಮುಖಂಡ ಯೋಗೇಶಗೌಡ ಕೊಲೆ ಪ್ರಕರಣದ ಶಿಕ್ಷೆಯಿಂದ ಬಿಗ್ ರಿಲೀಫ್ ಸಿಕ್ಕ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವೇಶ ದೊರೆತಿದೆ. ಹೈಕೋರ್ಟ್ ಈ ಪ್ರಕರಣದ ಶಿಕ್ಷೆಗೆ ತಡೆ ನೀಡಿ ಜಾಮೀನು ನೀಡಿದ್ದು, ಜತೆಗೆ ಸಾಕ್ಷಿ ನಾಶ ಕೇಸಿನಲ್ಲೂ ಕುಲಕರ್ಣಿಗೆ ಜಿಲ್ಲಾ ಪ್ರವೇಶದ ನಿರ್ಬಂಧ ಕುರಿತು ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವೇಶಿಸಿರುವ ಕುಲಕರ್ಣಿ ಈಗ ಕ್ಷೇತ್ರದ ಸುತ್ತಾಟ ನಡೆಸುತ್ತಿದ್ದಾರೆ. ಶನಿವಾರ ಸಂಜೆ ಗ್ರಾಮೀಣ ಕ್ಷೇತ್ರದ ಕಲ್ಲೂರು ಗ್ರಾಮಕ್ಕೆ ಭೇಟಿ ನೀಡಿದ ವೇಳೆ, ಕುಲಕರ್ಣಿ ಬೆಂಬಲಿಗ ಸಿದ್ದಪ್ಪ ದಂಡಿನ ತಮ್ಮ ನಾಯಕನ ಮುಂದೆಯೇ ಉರುಳು ಸೇವೆ ಮಾಡುವ ಮೂಲಕ ಹರಿಕೆ ಪೂರ್ಣಗೊಳಿಸಿ ಅತಿಮಾನುಷ ಅಭಿಮಾನ ಮೆರೆದಿದ್ದಾರೆ. ಶಾಸಕರ ಸಮ್ಮುಖದಲ್ಲೇ ನಡೆದ ಈ ವಿಶೇಷ ಹರಕೆ ತೀರಿಸುವ ಕಾರ್ಯ ಸ್ಥಳದಲ್ಲಿದ್ದವರ ಗಮನ ಸೆಳೆಯಿತು.
