Belagavi

ಜ್ಯೋತಿ ಸೆಂಟ್ರಲ್ ಸ್ಕೂಲ್‌ನಲ್ಲಿ ಗ್ರ್ಯಾಂಡ್ ಇಂಟರ್‌ಡಿಸಿಪ್ಲಿನರಿ ಎಕ್ಸಿಬಿಷನ್: ವಿದ್ಯಾರ್ಥಿಗಳಿಂದ ವಿನೂತನ ಪ್ರಾಜೆಕ್ಟ್ ಪ್ರದರ್ಶನ

Share

ಬೆಳಗಾವಿಯ ಕ್ಯಾಂಪ್‌ನಲ್ಲಿರುವ ಡಿ.ಎಂ.ಎಸ್. ಮಂಡಳಿಯ ಜ್ಯೋತಿ ಸೆಂಟ್ರಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಜ್ಞಾನ, ಸೃಜನಶೀಲತೆ ಮತ್ತು ಕಲ್ಪನಾ ಶಕ್ತಿಗೆ ಅದ್ಭುತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ‘ಗ್ರ್ಯಾಂಡ್ ಇಂಟರ್‌ಡಿಸಿಪ್ಲಿನರಿ ಎಕ್ಸಿಬಿಷನ್’ ಅತ್ಯಂತೋತ್ಸಾಹದಿಂದ ಆಯೋಜಿಸಲಾಯಿತು.

ಶಾಲೆ ಪ್ರಾಂಶುಪಾಲ ಪ್ರದೀಪ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಹಾಗೂ ಅಧ್ಯಕ್ಷ ಪ್ರೊ. ಆರ್.ಕೆ. ಪಾಟೀಲ್ ಅವರ ಅಮೂಲ್ಯ ಬೆಂಬಲ ಮತ್ತು ಸಹಕಾರದೊಂದಿಗೆ ಈ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಜ್ಯೋತಿ ಸೆಂಟ್ರಲ್ ಸ್ಕೂಲ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ಪಿ.ಡಿ. ಕಲೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರೊ. ಆರ್.ಎಸ್. ಪಾಟೀಲ್, ಕಾರ್ಯದರ್ಶಿ ಪ್ರೊ. ಎನ್.ಎ. ಘೋರ್ಪಡೆ, ಪ್ರಾಚಾರ್ಯ ಪ್ರದೀಪ್ ಪಾಟೀಲ್, ಉಪಪ್ರಾಂಶುಪಾಲ ಮನೋಹರ್ ಕರಾಡಿ, ವಿವಿಧ ಪತ್ರಿಕೆಗಳ ಪತ್ರಕರ್ತರು ಹಾಗೂ ವಿವಿಧ ವಿಷಯಗಳ ಪ್ರಾಜೆಕ್ಟ್‌ಗಳನ್ನು ಮೌಲ್ಯಮಾಪನ ಮಾಡಿದ ಗಣ್ಯ ತೀರ್ಪುಗಾರರು ಉಪಸ್ಥಿತರಿದ್ದರು.

ಈ ಪ್ರದರ್ಶನದಲ್ಲಿ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಕಲೆ, ಸಂಗೀತ, ನೃತ್ಯ ಹಾಗೂ ನಾಟಕ ಮತ್ತು ಆಹಾರ ಮಳಿಗೆ (ಫುಡ್ ಸ್ಟಾಲ್) ಸೇರಿದಂತೆ ವಿವಿಧ ವಿಭಾಗಗಳನ್ನು ಒಳಗೊಂಡಿತ್ತು. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿದ್ದ ನಾವೇನ್ಯತಾ ಮಾದರಿಗಳು, ಸಮಗ್ರ ಯೋಜನೆಗಳು ಮತ್ತು ಸೃಜನಾತ್ಮಕ ಪ್ರಸ್ತುತಿಗಳನ್ನು ಅತ್ಯಂತ ಆತ್ಮವಿಶ್ವಾಸದಿಂದ ಪ್ರದರ್ಶಿಸಿದರು.

ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ನಾವೀನ್ಯತೆ, ವಿಮರ್ಶಾತ್ಮಕ ಚಿಂತನೆ, ಸಂವಹನ ಮತ್ತು ತಂಡದ ಕೆಲಸದಂತಹ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಪ್ರಾಯೋಗಿಕ ಕಲಿಕೆಯ ಮೂಲಕ ವಿವಿಧ ವಿಷಯಗಳ ಜ್ಞಾನವನ್ನು ಅನುಭವಿಸಲು ಅನುವು ಮಾಡಿಕೊಡುವುದು ಈ ಪ್ರದರ್ಶನದ ಮುಖ್ಯ ಉದ್ದೇಶವಾಗಿತ್ತು.ವಿದ್ಯಾರ್ಥಿಗಳ ನಾವೇನ್ಯತಾ ಪರಿಕಲ್ಪನೆಗಳು, ಅತ್ಯುತ್ತಮ ಪ್ರಾಜೆಕ್ಟ್‌ಗಳು ಹಾಗೂ ಆತ್ಮವಿಶ್ವಾಸದ ಪ್ರಸ್ತುತಿಗಳು ಉಪಸ್ಥಿತರಿದ್ದ ಗಣ್ಯರು, ತೀರ್ಪುಗಾರರು, ಪತ್ರಕರ್ತರು, ಪೋಷಕರು ಮತ್ತು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದವು.

ಜ್ಞಾನ, ವಿಜ್ಞಾನ, ಕಲೆ ಮತ್ತು ಸಂಸ್ಕೃತಿಯ ಅನನ್ಯ ಸಂಗಮವನ್ನು ಒಂದೆಡೆ ತಂದ ಈ ಪ್ರದರ್ಶನವು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸೃಜನಶೀಲ ಸಾಮರ್ಥ್ಯದ ಸ್ಪೂರ್ತಿದಾಯಕ ನೋಟವಾಗಿ ಸಾಬೀತಾಯಿತು.

Tags:

error: Content is protected !!