ಗೋಕಾಕ ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಡಿವೈಎಸ್ಪಿ ರವಿ ನಾಯ್ಕ್ ಅವರ ನೇತೃತ್ವದಲ್ಲಿ, ಸಿಪಿಐ ಶ್ರೀಶೈಲ್ ಬ್ಯಾಕೋಡ, ಗೋಕಾಕ ಶಹರ ಪಿ ಎಸ್ ಐ ಕಿರಣ್ ಮೋಹಿತೆ, ಗ್ರಾಮೀಣ ಪಿಎಸ್ಐ ಕೆ. ವಾಲಿಕರ ಸೇರಿದಂತೆ ಅಂಕಲಗಿ ಮತ್ತು ಕೂಲಗೊಡ ಪಿಎಸ್ಐ ಹಾಗೂ ಎ ಎಸ್ ಐ ಗಳು ಮತ್ತು ಸುಮಾರು 35 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಗೋಕಾಕ ನಗರದ 6 ಮಂದಿ ರೌಡಿ ಶೀಟರ್ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ನಗರದ ಕಾಡು ಸಿದ್ದೇಶ್ವರ ಮಠದ ಹತ್ತಿರ, ಉಪಾರಗಲ್ಲಿ, ಜಲಾಲಗಲ್ಲಿ ಹಾಗೂ ಜೈನಬಸ್ತಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಈ ದಾಳಿ ನಡೆದಿದೆ.
ಮನೆಗಳಲ್ಲಿ ಶಸ್ತ್ರಾಸ್ತ್ರಗಳು, ಮಾದಕ ವಸ್ತುಗಳು ಹಾಗೂ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಇವೆಯೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಈ ಪೊಲೀಸ್ ಕಾರ್ಯಾಚರಣೆ ಇದೀಗ ಗೋಕಾಕ ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
