ಅಮಾನ್ ಸೇಠ್ ಅವರ ಹುಟ್ಟುಹಬ್ಬದ ವಿಶೇಷ ದಿನದಂದು ಬೆಳಗಾವಿಯ ಅಲ್-ಅಮೀನ್ ಪ್ರೌಢಶಾಲೆಯಲ್ಲಿ ನೂತನ ಸ್ಮಾರ್ಟ್ ಟಿವಿ ತರಗತಿಗಳನ್ನು ಉದ್ಘಾಟಿಸಲಾಯಿತು.

ಇಂದು ಕಾಂಗ್ರೆಸ್ ಯುವ ನಾಯಕ ಅಮಾನ್ ಸೇಠ್ ಅವರ ಜನ್ಮದಿನದ ಅಂಗವಾಗಿ ಬೆಳಗಾವಿಯ ಅಝಮ್ ನಗರದ ನೀನಾ ಸೂಪರ್ ಮಾರ್ಕೆಟ್ ಹತ್ತಿರವಿರುವ ಅಲ್-ಅಮೀನ್ ಪ್ರೌಢಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಮಾನ್ ಸೇಠ್ ಅವರು ಶಾಲೆಯಲ್ಲಿ ನೂತನವಾಗಿ ನವೀಕರಿಸಲಾದ ಮತ್ತು ಅತ್ಯಾಧುನಿಕ ಸ್ಮಾರ್ಟ್ ಟಿವಿಗಳನ್ನು ಹೊಂದಿರುವ ತರಗತಿಗಳನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಅರ್ಪಿಸಿದರು.
ಸಮಾರಂಭದಲ್ಲಿ ಶಾಸಕ ಆಸೀಫ್ ಸೇಠ್ ಮಾತನಾಡಿ ಈ ಕಾರ್ಯಕ್ರಮದಲ್ಲಿ ಮ್ಯಾನೇಜಿಂಗ್ ಕಮೀಟಿ, ಶಿಕ್ಷಕರು, ಸಿಬ್ಬಂದಿ, ಕಾರ್ಪೊರೇಟರ್ ಇಮ್ರಾನ್ ಫತೇಖಾನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಶುಭ ಹಾರೈಸಿದ್ದಾರೆ. ಮಕ್ಕಳ ಪ್ರೀತಿ ಮತ್ತು ತೋರಿಸಿದ ಅಪಾರ ಅಭಿಮಾನಕ್ಕೆ ಧನ್ಯವಾದ ಅರ್ಪಿಸಿದ ಅವರು, ಮಕ್ಕಳ ಈ ಪ್ರೀತಿ ಹಾಗೂ ಆಶೀರ್ವಾದವೇ ತಮಗೆ ಅತ್ಯಂತ ದೊಡ್ಡ ಮತ್ತು ಮಹತ್ವದ ದಿನವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ತಮ್ಮ ಜನ್ಮದಿನದ ಸರಳ ಸಮಾರಂಭದಲ್ಲಿ ಮಾತನಾಡಿದ ಆಸೀಫ್ ಸೇಠ್ ಅವರ ಪುತ್ರ ಅಮಾನ್ ಸೇಠ್, ಸಾರ್ವಜನಿಕ ಜೀವನದಲ್ಲಿ ಕಾಣುವಷ್ಟು ಸುಲಭವಾಗಿ ಅದು ಒಳಗಿರಲ್ಲ. ಪ್ರತಿದಿನ ಕಷ್ಟಪಟ್ಟು ಕೆಲಸ ಮಾಡಲು ಜನರ ಪ್ರೀತಿ ಹಾಗೂ ಅವರ ಪ್ರೋತ್ಸಾಹವೇ ತಮಗೆ ದೊಡ್ಡ ಶಕ್ತಿ ಎಂದು ತಿಳಿಸಿ, ತಮ್ಮ ಜನ್ಮದಿನಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಶಾಸಕ ಆಸೀಫ್ ಸೇಠ್, ಕಾರ್ಪೊರೇಟರ್ ಇಮ್ರಾನ್ ಫತೇಖಾನ್, ಬಾಬಾಜಾನ್ ಪಠಾಣ್, ಮ್ಯಾನೇಜಿಂಗ್ ಕಮಿಟಿ ಸದಸ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
