Belagavi

ಡಾ. ರವಿ ಪಾಟೀಲ ಆಸ್ಪತ್ರೆಯಲ್ಲಿ ನೂತನ ನೆಫ್ರೋ-ಯುರಾಲಜಿ ವಿಭಾಗ ಉದ್ಘಾಟನೆ: ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ಸೇವೆ!

Share

ಬೆಳಗಾವಿಯ ಏರ್‌ಪೋರ್ಟ್ ರಸ್ತೆಯಲ್ಲಿರುವ ಡಾ. ರವಿ ಪಾಟೀಲ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ನೆಫ್ರೋ-ಯುರಾಲಜಿ ವಿಭಾಗ ಹಾಗೂ ಡಯಾಲಿಸಿಸ್ ಘಟಕ ಲೋಕಾರ್ಪಣೆಗೊಂಡಿದ್ದು, ಬಡ ರೋಗಿಗಳಿಗೆ ಇದು ದೊಡ್ಡ ವರದಾನವಾಗಿದೆ.

ಡಾ. ರವಿ ಪಾಟೀಲ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಏರ್‌ಪೋರ್ಟ್ ರಸ್ತೆ ಶಾಖೆಯಲ್ಲಿ ಹೊಸದಾಗಿ ಪ್ರಾರಂಭಿಸಲಾಗಿರುವ ನೆಫ್ರೋ-ಯುರಾಲಾಜಿ ವಿಭಾಗದ ಉದ್ಘಾಟನಾ ಸಮಾರಂಭವು ಅತ್ಯಂತ ಉತ್ಸಾಹದಲ್ಲಿ ನೆರವೇರಿತು.ಈ ಕಾರ್ಯಕ್ರಮಕ್ಕೆ ಕರ್ನಾಟಕ ಉತ್ತರ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯರಾದ ಅರವಿಂದ ದೇಶಪಾಂಡೆ, ಕರ್ನಾಟಕ ಉತ್ತರ ಪ್ರಾಂತ್ಯ ಪ್ರಮುಖರಾದ ರಾಘವೇಂದ್ರ ಕಾಗವಾಡ, ಕ್ಷೇತ್ರ ಶಾರ್ನಿಕ್ ಪ್ರಮುಖರಾದ ಸುಧೀರ್ ಗಾಡಗೀಳ, ಕರ್ನಾಟಕ ವಿದ್ಯಾ ಭಾರತೀಯ ಅಧ್ಯಕ್ಷರಾದ ಪರಮೇಶ್ವರ ಹೆಗಡೆ, ನಗರ ಸಂಘಚಾಲಕ ಬಾಳಣ್ಣ ಕಗ್ಗಣಗಿ, ಪ್ರಾಂತ್ಯ ಉಪಾಧ್ಯಕ್ಷ ಶ್ರೀಕಾಂತ ಕದಮ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ದೇಶದಲ್ಲಿ ಪ್ರತಿವರ್ಷ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಹೊಸ ಕಿಡ್ನಿ ಫೇಲ್ಯೂರ್‌ ರೋಗಿಗಳು ಪತ್ತೆಯಾಗುತ್ತಿದ್ದು, ಮೂರೂವರೆ ಕೋಟಿಗೂ ಹೆಚ್ಚು ಡಯಾಲಿಸಿಸ್‌ ಸೆಷನ್‌ಗಳ ಅವಶ್ಯಕತೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಸದುದ್ದೇಶದಿಂದ ಈ ಹೊಸ ವಿಭಾಗವನ್ನು ಲೋಕಾರ್ಪಣೆಗೊಳಿಸಲಾಗಿದೆ.

ಬೆಳಗಾವಿಯ ಕುಡಚಿಯ ಏರಪೋರ್ಟ್ ರಸ್ತೆಯಲ್ಲಿರುವ ಡಾ. ರವಿ. ಪಾಟೀಲ್ ಆರ್ಥೋ & ನ್ಯೂರೋ ಕೇರ್ ಸೆಂಟರ್‌ನಲ್ಲಿ ನೂತನವಾಗಿ ನೆಫ್ರೋ-ಯೂರೋಲಾಜಿ ವಿಭಾಗವನ್ನು ಆರಂಭಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಾಯಿಲೆಗಳ ತಜ್ಞರಾದ ಡಾ. ವಿಜಯ್ ಪಾಟೀಲ್ ಮತ್ತು ಮೂತ್ರಪಿಂಡ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ನಂದೀಶ್ವರ ಹಟ್ಟಿ ಅವರು ಸೇವೆ ಸಲ್ಲಿಸಲಿದ್ದು, ಗ್ರಾಮೀಣ ಹಾಗೂ ಬಡ ಜನರಿಗೆ ಅನುಕೂಲವಾಗುವಂತೆ ಮೂರು ಡಯಾಲಿಸಿಸ್ ಯೂನಿಟ್‌ಗಳನ್ನು ಸಹ ಅಳವಡಿಸಲಾಗಿದೆ ಎಂದು ಡಾ. ರವಿ ಪಾಟೀಲ್ ಅವರು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು ಗ್ರಾಮೀಣ ಭಾಗದ ಬಡ ರೋಗಿಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ಕಡಿಮೆ ವೆಚ್ಚದಲ್ಲಿ ದೊರೆಯಬೇಕು ಎಂಬ ಉದ್ದೇಶದಿಂದ ಇಲ್ಲಿ ಕೇವಲ 500 ರೂಪಾಯಿಗಳಿಗೆ ಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ. ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ಉಚಿತ ಕನ್ಸಲ್ಟೇಷನ್ ಸೌಲಭ್ಯ ಕಲ್ಪಿಸಲಾಗಿದ್ದು, ರೋಗಿಗಳಿಗೆ ಬಾರವಾಗದಂತೆ ಕೇವಲ 500 ರೂ.ಗಳ ಸಬ್ಸಿಡಿ ದರದಲ್ಲಿ 24 ಗಂಟೆಗಳ ಕಾಲ ಡಯಾಲಿಸಿಸ್ ಸೇವೆಯನ್ನು ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ನೆಫ್ರಾಲಜಿಸ್ಟ್, ಯುರಾಲಜಿಸ್ಟ್ ಸೇರಿದಂತೆ ವಿವಿಧ ತಜ್ಞ ವೈದ್ಯರು, ಅನುಭವಿ ನರ್ಸಿಂಗ್ ಸಿಬ್ಬಂದಿ ಮತ್ತು ಸುಸಜ್ಜಿತ ಐಸಿಯು ಘಟಕದೊಂದಿಗೆ ಎಲ್ಲ ಅಗತ್ಯ ವೈದ್ಯಕೀಯ ಸೌಲಭ್ಯಗಳು ಲಭ್ಯವಿರಲಿವೆ.ರೋಟರಿ ಕ್ಲಬ್ ವೇಣು ಗ್ರಾಮ ಬೆಳಗಾವಿ ಹಾಗೂ ವೈದ್ಯಕೀಯ ತಂಡದ ಸಹಕಾರದಿಂದ ಈ ನೂತನ ಘಟಕ ಆರಂಭವಾಗಿದ್ದು, ನೆಫ್ರೋ-ಯೂರೋಲಜಿ ವಿಭಾಗಕ್ಕೆ ಬರುವ ರೋಗಿಗಳಿಗೆ ಉಚಿತ ಸಮಾಲೋಚನೆಯ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ ಎಂದರು.

ಈ ವೇಳೆ ವಿವಿಧ ಗಣ್ಯರು ಭಾಗಿಯಾಗಿದ್ಧರು.

Tags:

error: Content is protected !!