ಮಾನಸಿ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬ ಗ್ರಾಮದಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನ ಮಾರಾಡಗಿ ಗ್ರಾಮದಲ್ಲಿಂದು ಬೆಳಕಿಗೆ ಬಂದಿದೆ.

ಮೃತನನ್ನ ದ್ಯಾಮಣ್ಣ ಹಂಪಣ್ಣನವರ ಎಂದು ಗುರುತಿಸಲಾಗಿದೆ. ಕಳೆದ ದಿನ ತಡ ಸಂಜೆ ಅಥವಾ ರಾತ್ರಿ ವೇಳೆ ಮೃತ ವ್ಯಕ್ತಿ ಬಾವಿಗೆ ಹಾರಿರಬಹುದು ಎಂದು ಹೇಳಲಾಗುತ್ತಿದ್ದು, ಬೆಳಗ್ಗೆ ಗ್ರಾಮಸ್ಥರು ಬಾವಿ ಕಡೆ ನೋಡಿದಾಗ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿ ಶಾಮ ದಳದ ಸಿಬ್ಬಂದಿ ಕರೆಯಿಸಿ ಮೃತ ದೇಹವನ್ನು ಹೊರತೆಗೆಯಲಾಗಿದ್ದು, ಮೃತ ದೇಹವನ್ನು ಜಿಲ್ಲಾಸ್ಪತ್ತೆಗೆ ರವಾನಿಸಲಾಗಿದೆ. ಇನ್ನೂ ಮೃತ ವ್ಯಕ್ತಿ ಯಾವ ಕಾರಣಕ್ಕೆ ಹೀಗೆ ಮಾಡಿಕೊಂಡ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
