ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ್ ಭ್ರಷ್ಟಾಚಾರ ಹಾಗೂ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ (ಡಿ.ಎ.) ಪ್ರಕರಣ ಎದುರಿಸುತ್ತಿದ್ದಾರೆ. ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬುಧವಾರ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ನಗರದ ರಹವಾಸಿಗಳು ಧರಣಿ ಸತ್ಯಾಗ್ರಹ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ, ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆಸಿರುವ ಸಚಿವ ನಾಗೇಂದ್ರ ಅವರ ರಾಜೀನಾಮೆ ಬಗ್ಗೆ ಮಾತನಾಡಿರುವ ಶಾಸಕ ಅಭಯ ಪಾಟೀಲ್ ಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದು ನೈತಿಕತೆ ಅಭಯ ಪಾಟೀಲ್ ಗೆ ಇಲ್ಲ. ಕಳೆದ 10 ವರ್ಷಗಳ ಹಿಂದಿನಿಂದಲೂ ಅಕ್ರಮ ಆಸ್ತಿ ಕಬಳಿಕೆ ಹಾಗೂ ಭ್ರಷ್ಟಾಚಾರ ನಡೆಸಿರುವುದು ಲೋಕಾಯುಕ್ತ ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ಇದೆ ಎಂದರು.
ಬಿಜೆಪಿಗರು ಸಚಿವ ನಾಗೇಂದ್ರ ರಾಜೀನಾಮೆ ಪಡೆಯುವ ಮುನ್ನ ಮೊದಲು ಭ್ರಷ್ಟಾಚಾರ ನಡೆಸಿರುವ ಶಾಸಕ ಅಭಯ ಪಾಟೀಲ್ ಅವರ ರಾಜೀನಾಮೆ ಪಡೆದು ಹೋರಾಟ ಮಾಡಬೇಕು. ಅಲ್ಲದೆ ಅವರನ್ನು ಬಿಜೆಪಿ ಪಕ್ಷದಿಂದ ಹೊರ ಹಾಕಬೇಕು ಎಂದ ಅವರು, ಶೀಘ್ರದಲ್ಲೇ ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದಲೇ ಪಾದಯಾತ್ರೆ ಹೋರಾಟ ಆರಂಭಿಸಲಾಗುವುದು ಎಂದರು.
ರಾಜಕುಮಾರ ಟೋಪಣ್ಣವರ ಮಾತನಾಡಿ, ಬಿಜೆಪಿ ನಾಯಕರು ರಾಜ್ಯಾದ್ಯಂತ ಕಾಂಗ್ರೆಸ್ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಹೋರಾಟ ಮಾಡುತ್ತಿರುವುದು ಅವರಿಗೆ ನೈತಿಕತೆ ಇಲ್ಲ. ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳುತ್ತಾರೆ. ಆದರೆ ಈಗ ಅದನ್ನು ಬದಲಾವಣೆ ಮಾಡಿ ಮೈನಿಂಗ್, ಭ್ರಷ್ಟಾಚಾರ ಮಾಡಿರುವ ಶಾಸಕ ಅಭಯ ಪಾಟೀಲ್ ರಾಜೀನಾಮೆ ಪಡೆಯುವುದು ಎಂದು ಪ್ರಶ್ನಿಸಿದರು.
ಶಾಸಕ ಅಭಯ ಪಾಟೀಲ್ ನಾಗೇಂದ್ರ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಭಾಷಣ ಮಾಡುವ ಅವರು ಹಾಸ್ಯಾಸ್ಪದ. ಕೂಡಲೇ ಶಾಸಕ ಅಭಯ ಪಾಟೀಲ್ ಅವರ ರಾಜೀನಾಮೆ ಪಡೆದು ಬೇರೆ ಪಕ್ಷದರ ರಾಜೀನಾಮೆಗೆ ಹೋರಾಟ ನಡೆಸಲಿ ಎಂದು ಸವಾಲ್ ಹಾಕಿದರು.
ಈ ಸಂದರ್ಭದಲ್ಲಿ ಅನಿಲ್ ಉಪರಿ, ಯುವರಾಜ ತಳವಾರ, ಸದ್ದಾಂ ತಹಶಿಲ್ದಾರ, ಸಿದ್ಧಾರ್ಥ ಚೌಹಾನ್, ಸಚಿನ್ ತಳವಾರ, ಸಲೀಂ ಸನದಿ, ಆನಂದ ಪೂಜಾರಿ, ಬಲರಾಮ ಸಂಗೋಳಿ, ಆಸೀಫ್ ಮುಲ್ಲಾ, ಆಶೀಷ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
