ಸಚಿವ ಜಮೀರ್ ಅಹ್ಮದ್ ಅವರು ಉದ್ದೇಶಪೂರ್ವಕವಾಗಿ ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಮೀರ್ ಒಬ್ಬ ಮತಾಂಧ ವ್ಯಕ್ತಿ ಎಂದು ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಂವಿಧಾನ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯ ಬಗ್ಗೆ ಗೌರವವಿದ್ದರೆ ಜಮೀರ್ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ, ಕರ್ನಾಟಕ ವಿಧಾನಸಭೆಯ ಸದಸ್ಯನಾಗಿ ಹಾಗೂ ಸಚಿವನಾಗಿ ಜಮೀರ್ ಅಹ್ಮದ್ ಅವರು ರಾಷ್ಟ್ರ ಧ್ವಜಾರೋಹಣ ಮತ್ತು ವಂದೇ ಮಾತರಂ ಗೀತೆಗೆ ಗೌರವ ನೀಡಬೇಕಿತ್ತು ಎಂದರು.

ಆದರೆ ಉದ್ದೇಶಪೂರ್ವಕವಾಗಿ ವಂದೇ ಮಾತರಂ ಹಾಡದೇ ಇರುವ ಮೂಲಕ ಗೀತೆಗೆ ಅಪಮಾನ ಮಾಡುವ ಉದ್ದೇಶವನ್ನು ತೋರಿಸಿದ್ದಾರೆ. ಈ ಮೂಲಕ ಅವರು ಮತಾಂಧ ವ್ಯಕ್ತಿ ಎಂದು ಪ್ರೂವ್ ಆಗಿದೆ ಎಂದು ಯತ್ನಾಳ ಆರೋಪಿಸಿ ದರು. ಇನ್ನೂ ” ವಂದೇ ಮಾತರಂ ಹಾಡುವುದಿಲ್ಲ ಎನ್ನುವ ಉದ್ದೇಶದಿಂದಲೇ ಅವರು ನಡೆದುಕೊಂಡಿದ್ದಾರೆ. ವಂದೇ ಮಾತರಂ ಗೀತೆಯನ್ನು ಅಪಮಾನ ಮಾಡುವ ಉದ್ದೇಶ ಅವರಲ್ಲಿದೆ. ಒಬ್ಬ ಮತಾಂಧ ವ್ಯಕ್ತಿ ಎನ್ನುವುದು ಇದರಿಂದ ಪ್ರೂವ್ ಆಗಿದೆ ಎಂದು ವಾಗ್ದಾಳಿ ನಡೆಸಿದರು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ದೇಶದ ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಬಗ್ಗೆ ಗೌರವವಿದ್ದರೆ ಜಮೀರ್ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲವಾದರೆ ಇಂತಹ ಕೆಟ್ಟ ಚಾಳಿ ಬೆಳೆಯುತ್ತದೆ ಎಂದು ಯತ್ನಾಳ ಎಚ್ಚರಿಸಿದರು. ರಾಷ್ಟ್ರಕ್ಕೆ ಹಾಗೂ ಸಂವಿಧಾನಕ್ಕೆ ಗೌರವ ನೀಡದ ಜನಪ್ರತಿನಿಧಿಗಳನ್ನು ಶಾಸಕ ಸ್ಥಾನದಿಂದ ವಜಾಗೊಳಿ ಸುವಂತಹ ಕಠಿಣ ಕಾನೂನು ಜಾರಿಗೆ ತರಬೇಕು. ಸಂವಿಧಾನಕ್ಕೆ ಅಪಮಾನ ಮಾಡಿದವರಿಗೆ ಶಾಸಕ ಸ್ಥಾನದಿಂದ ಅನರ್ಹ ಗೊಳಿಸುವುದರ ಜೊತೆಗೆ ಜೀವಮಾನದಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಯತ್ನಾಳ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಸಂವಿಧಾನದ ಪ್ರತಿಯನ್ನು ಎಸೆದಿದ್ದಾರೆ ಎಂದು ಆರೋಪಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸೋಲಿಸಿದವರು ಕಾಂಗ್ರೆಸ್ನವರು ಎಂದು ಟೀಕಿಸಿದರು. ಲೋಕಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಕದವರು ಬೇರೆ ಪಕ್ಷಗಳ ಕುರಿತು ಮಾತನಾಡುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಸಂವಿಧಾನ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆ ಎಂದು ಯತ್ನಾಳ ಹೇಳಿದರು.
