ರಾಜ್ಯದ ಅಹಿಂದ ನಾಯಕರು, ಲೋಕೋಪಯೋಗಿ ಸಚಿವರೂ ಸತೀಶ್ ಅಣ್ಣಾ ಜಾರಕಿಹೊಳಿ ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿ ಎಂದು ಹಾರೈಸಿ ರಾಜಸ್ಥಾನದ ಪವಿತ್ರ ಅಜ್ಮೀರ್ ಖ್ವಾಜಾ ಗರೀಬ್ ನವಾಜ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಚಾದರ ಅರ್ಪಿಸಲಾಯಿತು.

ಸತೀಶ್ ಜಾರಕಿಹೊಳಿ ಅವರ ಅಪ್ಪಟ ಅಭಿಮಾನಿ ಹಾಗೂ ಸದಲಗಾದ ನಿವಾಸಿ ಅಜರುದ್ದೀನ್ ಉಸ್ಮಾನ್ ಶೇಖಜಿ ಅವರು ದರ್ಗಾಕ್ಕೆ ಭೇಟಿ ನೀಡಿ ಈ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಜರುದ್ದೀನ್ ಶೇಖಜಿ, “ಸತೀಶ್ ಅಣ್ಣಾ ಜಾರಕಿಹೊಳಿ ಅವರು ಪ್ರಬುದ್ಧ ರಾಜಕಾರಣಿ, ಯುವಕರ ಆಧಾರಸ್ತಂಭ ಹಾಗೂ ಸರಳತೆಯ ಸಾಹುಕಾರರಾಗಿದ್ದಾರೆ. ರಾಜ್ಯದ ಅಭಿವೃದ್ಧಿ, ಸಮಾಜದ ಶಾಂತಿ ಮತ್ತು ಸೌಹಾರ್ದತೆಗಾಗಿ ಅವರು ಶ್ರಮಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಅವರಿಗೆ ಉಪ ಮುಖ್ಯಮಂತ್ರಿಯಂತಹ ಮತ್ತಷ್ಟು ಉನ್ನತ ಜವಾಬ್ದಾರಿ ದೊರೆಯಲಿ ಎಂದು ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.
