Kagawad

ಶೇಡಬಾಳ: 100% ಪ್ರಗತಿ ಸಾಧಿಸಿದ ಏಳು ಬಿಎಲ್‌ಒಗಳಿಗೆ ಸನ್ಮಾನ

Share

ರಾಜ್ಯಾದ್ಯಂತ ನಡೆದ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ರಮದಲ್ಲಿ, ಶೇಡಬಾಳ ಪಟ್ಟಣದ 16 ಬಿಎಲ್‌ಒಗಳ ಪೈಕಿ ಏಳು ಮಂದಿ ಶೇ. 100ರಷ್ಟು ಪ್ರಗತಿ ಸಾಧಿಸಿದ್ದು, ಅವರ ಸೇವೆ ಹಾಗೂ ಕಾರ್ಯ ಶ್ಲಾಘನೀಯವಾಗಿದೆ ಎಂದು ಶೇಡಬಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಕೆ. ಗಾವಡೆ ಹೇಳಿದರು.

ಸೋಮವಾರ ಶೇಡಬಾಳ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ 16 ಬಿಎಲ್‌ಒಗಳ ಸಭೆ ನಡೆಯಿತು. ಸಭೆಯಲ್ಲಿ ಶೇ. 100ರಷ್ಟು ಸಾಧನೆ ಮಾಡಿದ ಏಳು ಮಂದಿ ಬಿಎಲ್‌ಒಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಕೆ. ಗಾವಡೆ ಅವರು, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಬಿಎಲ್‌ಒಗಳು ಶ್ರಮವಹಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಶೇ. 100ರಷ್ಟು ಸಾಧನೆ ಮಾಡಿದ ಶ್ರೀಮತಿ ಎಂ.ಎಂ. ಮಾಣಕಾಪುರ್, ಎಸ್. ಬಾಳಿಕಾಯಿ ಸೇರಿದಂತೆ ಇತರ ಬಿಎಲ್‌ಒಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶೇಡಬಾಳ ಗ್ರಾಮ ಆಡಳಿತಾಧಿಕಾರಿ ಕೆ.ಪಿ. ಬಡಿಗೇರ್ ಮಾಹಿತಿ ನೀಡಿ, ಪಟ್ಟಣದಲ್ಲಿ ಒಟ್ಟು 12,323 ಮತದಾರರಿದ್ದು, ಇದುವರೆಗೆ ಸುಮಾರು 12 ಸಾವಿರ ಮತದಾರರ ಪರಿಶೀಲನೆ ಪೂರ್ಣಗೊಂಡಿದೆ. ಉಳಿದ ಮತದಾರರ ಪರಿಶೀಲನಾ ಕಾರ್ಯವನ್ನು ನಾಲ್ಕು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಮೇಲ್ವಿಚಾರಕರಾದ ಎಸ್.ಎಸ್. ಸಾಜನೆ ಅವರು ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಅಭಿನಂದನಾ ಸಮಾರಂಭದಲ್ಲಿ ಬಿಎಲ್‌ಒಗಳಾದ ದೇವದಾಸ್ ಗುಪ್ಪೆ, ಎಂ.ಎಲ್. ಕುಂಬಾರ್, ಸಂಜೀವ್ ಪರಿಟ್, ಅಕ್ಷತಾ ಮಾಲಗಾವೆ, ನಶೀಮಾ ಕಲಾವಂತ್, ಕೆ.ಕೆ. ಕಾಂಬಳೆ, ಜ್ಯೋತಿ ಪಾಟೀಲ್, ಸುಧೀರ್ ಮಾಳಪ್ಪಗೋಳ, ವೆಂಕಟೇಶ್ ಚಲವಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:

error: Content is protected !!