Dharwad

ಧಾರವಾಡದಲ್ಲಿ ಈಜಲು ಹೋಗಿ ಯುವ ಸಾವು…

Share

ಈಜಲು ಬಾರದ ಯುವಕನೊಬ್ಬ ಭಾವಿಯಲ್ಲಿ ಮುಳುಗಿ ಮೃತಪಟ್ಟಿದ್ದು, ಕಳೆದ ದಿನದಿಂದ ಮೃತ ದೇಹಕ್ಕಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಕೊನೆಗೂ ಈಗ ಮೃತ ದೇಹವನ್ನು ಹೊರ ತೆಗೆಯುವಲ್ಲಿ ಅಗ್ನಿ ಶಾಮಕದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಭಾನುವಾರ ಮಧ್ಯಾಹ್ನ 3 ಗಂಟೆಗೆ ಧಾರವಾಡದ ನುಚ್ಚಂಬ್ಲಿ ಬಾವಿಯಲ್ಲಿ ಧಾರವಾಡ ತೇಜಸ್ವಿ ನಗರದ ನಿವಾಸಿ ಲಕ್ಷಿತ ಉಪ್ಪಾರ (17) ಈಜು ಬಾರದೇ ಯುವಕ ಸಾವನಪ್ಪಿದ್ದಾನೆ. ಯುವಕನ ಶವಕ್ಕಾಗಿ ನುಚ್ಚಂಬ್ಲಿ ಬಾವಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನಿನ್ನೆಯಿಂದ ಕಾರ್ಯಾಚರಣೆ ನಡೆಸಿ ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.

Tags:

error: Content is protected !!