Uncategorized

*ಖಾನಾಪುರ: ಕೊನೆಗೂ ಮಾಳಅಂಕಲೆ, ಝಾಡಅಂಕಲೆಗೆ ಕೆಎಸ್‌ಆರ್‌ಟಿಸಿ ಭಾಗ್ಯ; ಹಳ್ಳಿಗಳಿಗೆ ತಲುಪಿತು ಸರ್ಕಾರಿ ಬಸ್!*

Share

ಹಲವು ದಶಕಗಳಿಂದ ಸಾರಿಗೆ ಸೌಲಭ್ಯದಿಂದ ವಂಚಿತವಾಗಿದ್ದ ಖಾನಾಪುರ ತಾಲೂಕಿನ ಮಾಳಅಂಕಲೆ ಮತ್ತು ಝಾಡಅಂಕಲೆ ಗ್ರಾಮಗಳಿಗೆ ಕೊನೆಗೂ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭವಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರು ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದು, ಗ್ರಾಮಸ್ಥರು ಸಂಭ್ರಮಾಚರಣೆ ನಡೆಸಿದರು.


ಖಾನಾಪುರ ತಾಲೂಕಿನ ಮಾಳಅಂಕಲೆ ಹಾಗೂ ಝಾಡಅಂಕಲೆ ಗ್ರಾಮಗಳಿಗೆ ಕೊನೆಗೂ ಕೆಎಸ್‌ಆರ್‌ಟಿಸಿ ಬಸ್ ಭಾಗ್ಯ ಸಿಕ್ಕಿದ್ದು, ಗ್ರಾಮಸ್ಥರ ಹಲವು ವರ್ಷಗಳ ನಿರೀಕ್ಷೆ ಈಡೇರಿದೆ. ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಚಾಲನೆ ನೀಡಿದ ಈ ಉದ್ಘಾಟನಾ ಸಮಾರಂಭದಲ್ಲಿ ಚಾಲಕ, ನಿರ್ವಾಹಕ ಹಾಗೂ ಗಣ್ಯರನ್ನು ಗ್ರಾಮಸ್ಥರು ಸನ್ಮಾನಿಸಿದರು. ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರ ಶಿಫಾರಸು ಹಾಗೂ ಸಮಿತಿ ಸದಸ್ಯ ರುದ್ರಪ್ಪ ಪಾಟೀಲ ಅವರ ನಿರಂತರ ಹೋರಾಟದ ಫಲವಾಗಿ ಈ ಬಸ್ ಸೇವೆ ಲಭ್ಯವಾಗಿದೆ. ಸಂಚಾರಕ್ಕೆ ಅಡ್ಡಿಯಾಗುವ ರಸ್ತೆ ಬದಿಯ ಗಿಡಗಂಟಿಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸಲು ಅಧ್ಯಕ್ಷರು ಮನವಿ ಮಾಡಿದರು. ಈ ನೂತನ ಸೇವೆಯಿಂದ ವಿದ್ಯಾರ್ಥಿಗಳ ಶಿಕ್ಷಣ, ರೋಗಿಗಳ ಆರೋಗ್ಯ ಸೇವೆ ಹಾಗೂ ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಇದ್ದ ದೊಡ್ಡ ತೊಡಕು ನಿವಾರಣೆಯಾದಂತಾಗಿದೆ.

Tags:

error: Content is protected !!