Uncategorized

ಬೆಳಗಾವಿ: ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಹುತಾತ್ಮ ದಿನಾಚರಣೆ; ಕಬ್ಬಿನ ಗಣಿಗೆ ಪೂಜೆ ಸಲ್ಲಿಸಿ ಗೌರವ

Share

ರೈತ ಹುತಾತ್ಮ ದಿನಾಚರಣೆ ಅಂಗವಾಗಿ, ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆಯವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಬ್ಬಿನ ಗಣಿಗೆ ಪೂಜೆ ಸಲ್ಲಿಸಿ ಹುತಾತ್ಮ ರೈತರಿಗೆ ಮಂಗಳವಾರ ಗೌರವ ಸಲ್ಲಿಸಿದರು.


ರೈತ ಹುತಾತ್ಮ ದಿನಾಚರಣೆಯ ಆಚರಿಸಿ ಮಾತನಾಡಿದ ರೈತ ಮುಖಂಡ ಪ್ರಕಾಶ ನಾಯಕ, ಪೊಲೀಸರ ಸರಕಾರದ ಗುಂಡಿಗೆ ಬಲಿಯಾಗಿರುವ ರೈತ ಹೋರಾಟಗಾರರ ಗೌರವ ಸಲ್ಲಿಸುವ ನಿಟ್ಟಿನಿಂದ ಹುತಾತ್ಮ ರೈತ ದಿನಾಚರಣೆ ಆಚರಿಸುತ್ತಿದ್ದೇವೆ. ರೈತರ ಬಲಿದಾನಕ್ಕೆ ನಾವೆಲ್ಲ ರೈತರು ಒಗ್ಗಟ್ಟಾಗಿ ಸಂಘಟನೆ ಮಾಡಿಕೊಂಡು ನಮ್ಮ ಹಿರಿಯರ ಬೇಡಿಕೆಯನ್ನು ಈಡೇರಿಸುವವರೆಗೂ ಹೋರಾಟ ನಡೆಸಬೇಕು ಎಂದರು.

ರೈತ ಮುಖಂಡ ಅಪ್ಪಾಸಾಹೇಬ ದೇಸಾಯಿ ಮಾತನಾಡಿ, ನರಗುಂದ, ನವಲಗುಂದನಲ್ಲಿ ರೈತರ ಬೇಡಿಕೆಗೆಗಾಗಿ ಹೋರಾಟ ನಡೆಸಿದ ವೇಳೆ ಅಂದಿದ ದಿ. ಗುಂಡೂರಾವ್ ನೇತೃತ್ವದ ಸರಕಾರ ಪೊಲೀಸರ ಮೂಲಕ ಗುಂಡಿನ ದಾಳಿ ನಡೆಸಿ ರೈತರ ಮೇಲೆ ಅಟ್ಟಹಾಸ ಮೆರೆದು ಇಬ್ಬರು ರೈತರನ್ನು ಬಲಿ ಪಡೆದಿದ್ದು ಎಂದಿಗೂ ಮರೆಯುವ ಹಾಗಿಲ್ಲ. ಇಂದಿಗೂ ರೈತರು ತಮ್ಮ ಬೇಡಿಕೆಯ ಸಲುವಾಗಿ ಹೋರಾಟ ಮಾಡಿಕೊಂಡು ತಮ್ಮ ಬೇಡಿಕೆ ಈಡೇರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿವಿಧ ರೈತ ಸಂಘಟನೆಯ ಮುಖಂಡರು ‌ಉಪಸ್ಥಿತರಿದ್ದರು.

Tags:

error: Content is protected !!