Vijaypura

ಆಲಮಟ್ಟಿ ಜಲಾಶಯಕ್ಕೆ 40,173 ಕ್ಯೂಸೆಕ್ ಒಳಹರಿವು; 16,458 ಕ್ಯೂಸೆಕ್ ನೀರು ಹೊರಹರಿವು

Share

ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯಕ್ಕೆ ಸೋಮವಾರ ಬೆಳಿಗ್ಗೆ 8 ಗಂಟೆಯ ವೇಳೆಗೆ 40,173 ಕ್ಯೂಸೆಕ್ ಸರಾಸರಿ ಒಳಹರಿವು ದಾಖಲಾಗಿದೆ.

ಜಲಾಶಯದ ನೀರಿನ ಮಟ್ಟ 517.78 ಮೀಟರ್ ತಲುಪಿದ್ದು, ಒಟ್ಟು ಸಂಗ್ರಹ 94.642 ಟಿಎಂಸಿ ಹಾಗೂ ಜೀವಂತ ನೀರಿನ ಸಂಗ್ರಹ 77.022 ಟಿಎಂಸಿ ಇದೆ.
ಜಲಾಶಯದಿಂದ ಒಟ್ಟು 16,458 ಕ್ಯೂಸೆಕ್ ನೀರನ್ನು ವಿವಿಧ ಉದ್ದೇಶಗಳಿಗೆ ಹೊರಬಿಡ ಲಾಗುತ್ತಿದೆ. ಇದರಲ್ಲಿ ಕೆಪಿಸಿಎಲ್ ಮೂಲಕ ನದಿಗೆ 13,250 ಕ್ಯೂಸೆಕ್, ಕೆರೆ ತುಂಬಿಸಲು 2,800 ಕ್ಯೂಸೆಕ್ ಹಾಗೂ ಕುಡಿಯುವ ನೀರು, ಆವಿಯಾಗುವಿಕೆ ಮತ್ತು ಬ್ಯಾಕ್‌ವಾಟರ್ ಉದ್ದೇಶಗಳಿಗೆ 408 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.

ಪ್ರಸ್ತುತ ಒಳಹರಿವು ಹೊರಹರಿವಿಗಿಂತ ಹೆಚ್ಚಿರುವುದರಿಂದ ಜಲಾಶಯದ ನೀರಿನ ಮಟ್ಟ ಹಂತಹಂತವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕೃಷ್ಣಾ ನದಿ ಪಾತ್ರದ ಜನರು ಹಾಗೂ ರೈತರು ನೀರಾವರಿ ಇಲಾಖೆಯ ಸೂಚನೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Tags:

error: Content is protected !!