ಬೆಳಗಾವಿ ತಾಲೂಕಿನ ನೂತನ ಆರೋಗ್ಯಾಧಿಕಾರಿಯಾಗಿ ನೇಮಕಗೊಂಡಿರುವ ಡಾಕ್ಟರ್ ಸಂಜೀವ ನಾಂದ್ರೆ ಅವರನ್ನು ತಾಲೂಕಿನ ಗ್ರಾಮೀಣ ಮತ್ತು ನಗರ ಪ್ರದೇಶದ ವೈದ್ಯರ ತಂಡವು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದೆ.

ನೂತನ ತಾಲೂಕಾ ಆರೋಗ್ಯಾಧಿಕಾರಿ ಡಾಕ್ಟರ್ ಸಂಜೀವ ನಾಂದ್ರೆ ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಬೆಳಗಾವಿ ತಾಲೂಕಾ ರೂರಲ್ ಮತ್ತು ಅರ್ಬನ್ ವೈದ್ಯರ ತಂಡದವರು ಭೇಟಿಯಾಗಿ ಅಭಿನಂದಿಸಿ ಬರಮಾಡಿಕೊಂಡರು. ಈ ಹಿಂದೆ ಖಾನಾಪುರ ಸೇರಿದಂತೆ ಬೆಳಗಾವಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಒಬ್ಬ ದಕ್ಷ ಆಡಳಿತಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಡಾ. ಸಂಜೀವ ನಾಂದ್ರೆ ಅವರ ಅನುಭವ ತಾಲೂಕಿನ ಆರೋಗ್ಯ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಾಕ್ಟರ್ ಸಲೀಮಾ ನದಾಫ್, ಡಾಕ್ಟರ್ ಪ್ರಶಾಂತ, ಡಾಕ್ಟರ್ ಶೌಶ್ಮಾ, ಡಾಕ್ಟರ್ ಅರ್ಪಿತಾ, ಡಾಕ್ಟರ್ ಕೃಷ್ಣಾ ಹಾಗೂ ಡಾಕ್ಟರ್ ಶಿವಪ್ರಭು ಸೇರಿದಂತೆ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದು ಹೂಗುಚ್ಛ ನೀಡಿ ಬರಮಾಡಿಕೊಂಡರು.
