Khanapur

ಖಾನಾಪುರದ ಸರ್ವೋದಯ ವಿದ್ಯಾಲಯದಲ್ಲಿ ವಿಭಿನ್ನ ಪಾಲಕರ ಸಭೆ: ಒತ್ತಡರಹಿತ ಶಿಕ್ಷಣಕ್ಕೆ ಪ್ರಾಂಶುಪಾಲರ ಕರೆ

Share

ಖಾನಾಪುರ ಪಟ್ಟಣದ ಸರ್ವೋದಯ ವಿದ್ಯಾಲಯದಲ್ಲಿ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ಪಾಲಕರ ಸಭೆ ಅತ್ಯಂತ ಉತ್ಸಾಹದಿಂದ ಜರುಗಿದೆ. ಮಕ್ಕಳ ಒತ್ತಡರಹಿತ ವಿದ್ಯಾಭ್ಯಾಸಕ್ಕೆ ಪಾಲಕರು ಸಹಕರಿಸಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಲಾಯಿತು. ಶಾಲೆಯ ಶೈಕ್ಷಣಿಕ ಪದ್ಧತಿ ಹಾಗೂ ಆಚಾರ-ವಿಚಾರಗಳ ಕುರಿತು ಪಾಲಕರು ಮತ್ತು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಗಮನ ಸೆಳೆಯಿತು.

ಸ್ಥಳೀಯ ಸರ್ವೋದಯ ವಿದ್ಯಾಲಯ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ವಿಶೇಷ ಸಭೆಯಲ್ಲಿ ಪ್ರಾಂಶುಪಾಲರಾದ ಫಾದರ್ ನೆಲ್ಸನ್ ಪಿಂಟೋ ಅವರು ವಿದ್ಯಾರ್ಥಿಗಳು ದಿನನಿತ್ಯ ಪಾಲಿಸುವ ಶಿಸ್ತು, ಆಚಾರ-ವಿಚಾರಗಳ ಕುರಿತು ಪಾಲಕರ ಸಮ್ಮುಖದಲ್ಲೇ ಮಕ್ಕಳೊಂದಿಗೆ ನೇರ ಸಂವಾದ ನಡೆಸುವ ಮೂಲಕ ವಿನೂತನ ಪ್ರಯತ್ನ ಮಾಡಿದರು. ತಮ್ಮ ಮಕ್ಕಳಿಗೆ ಮನೆಯಲ್ಲೂ ಸೌಹಾರ್ದಯುತ ವಾತಾವರಣ ನಿರ್ಮಿಸಿ, ಒತ್ತಡವಿಲ್ಲದೆ ಕಲಿಯಲು ಪಾಲಕರು ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು. ಇದೇ ವೇಳೆ ಪಾಲಕರಿಂದ ಶಾಲಾ ಶಿಕ್ಷಣ ಪದ್ಧತಿಯ ಬಗ್ಗೆ ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಪಾಲಕರು ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.

Tags:

error: Content is protected !!