Vijaypura

ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ; ‘ನವೆಂಬರ್‌ಗೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಾರೆ’

Share

ವಿಜಯಪುರ ನಗರದ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸಿದರು.

ವಿಜಯಪುರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, “ವಿಜಯೇಂದ್ರ ಪರ ಇರುವ ಫೇಸ್‌ಬುಕ್ ಪ್ರೊಫೈಲ್‌ಗಳ ಲಾಕ್ ತೆಗೆದು ಸಾರ್ವಜನಿಕವಾಗಿ ಎದುರಿಸಲಿ. ಅಪ್ಪನಿಗೆ ಹುಟ್ಟಿದ್ದರೆ ಫೇಸ್‌ಬುಕ್ ಲಾಕ್ ಓಪನ್ ಮಾಡಲಿ” ಎಂದು ಸವಾಲು ಹಾಕಿದರು. ನಮ್ಮ ಕಾರ್ಯಕರ್ತರು ಚಾಮರಾಜನಗರದಿಂದ ಬೀದರ್‌ವರೆಗೆ ಮೆಟ್ಟಿನಿಂದ ಮೆಟ್ಟಿಗೆ ಉತ್ತರ ಕೊಡುತ್ತಾರೆ. ಮೆಟ್ಟಿನಿಂದ ಹೊಡೆಯುತ್ತಾರೆ ಅಂತಾನೇ ಫೇಸ್‌ಬುಕ್ ಲಾಕ್ ಮಾಡಿ ಕೊಂಡಿದ್ದಾರೆ. ವಿಜಯೇಂದ್ರ ಚೇಲಾಗಳ ಫೇಸ್‌ಬುಕ್ ಪ್ರೊಫೈಲ್‌ಗಳನ್ನು ತೆರೆದರೆ ‘ಲಾಕ್’ ಎಂದು ಬರುತ್ತದೆ” ಎಂದು ವ್ಯಂಗ್ಯವಾಡಿದರು. ಇದೇ ವೇಳೆ, “ನವೆಂಬರ್ ವೇಳೆಗೆ ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಾರೆ” ಎಂದು ಯತ್ನಾಳ್ ಭವಿಷ್ಯ ನುಡಿದರು.

Tags:

error: Content is protected !!