ಬೆಳಗಾವಿಯ ಮಹಾಂತೇಶ ನಗರದ ಸಂಗೀತ ಕಲಾ ತಂಡದ ವತಿಯಿಂದ ಪಂಚ ಭಾಷೆಗಳ ಪ್ರಖ್ಯಾತ ಗಾಯಕಿ ಡಾ. ಎಸ್. ಜಾನಕಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.


ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಂ. ವೈ. ಮೆಣಸಿನಕಾಯಿ ಅವರು, ಭಾರತ ಕಂಡ ಅಪರೂಪದ ಕೋಗಿಲೆ ಕಂಠದ ಗಾಯಕಿ ಡಾ. ಎಸ್. ಜಾನಕಿ ಅವರು ಅದ್ಭುತ ಭಾಷಾ ಪಾಂಡಿತ್ಯ ಹಾಗೂ ತೀಕ್ಷ್ಣ ಜ್ಞಾಪಕ ಶಕ್ತಿಯನ್ನು ಹೊಂದಿದ್ದರು. ಪಂಚ ಭಾಷೆಗಳ ಪರಿಣಿತಿಯೊಂದಿಗೆ ಎಲ್ಲಾ ಸನ್ನಿವೇಶ ಮತ್ತು ಪಾತ್ರಗಳಿಗೆ ಜೀವ ತುಂಬಿದ ಅವರು, ದೈಹಿಕವಾಗಿ ನಮ್ಮನ್ನು ಅಗಲಿದ್ದರೂ ಭಾವನಾತ್ಮಕವಾಗಿ ಭಾರತದ ಉದ್ದಗಲಕ್ಕೂ ಅಮರರಾಗಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು. ಈ ವೇಳೆ ನಗರದ ಪ್ರಮುಖ ಕಲಾವಿದರು ಹಾಗೂ ಗಣ್ಯರಾದ ಚಂದ್ರಕಾಂತ್ ಅಪ್ಪಣ್ಣನವರ್, ಬಿ. ಎ. ಪಾಟಿಲ್, ಭೀಮಪ್ಪ ಗವನಾಳೆ, ಡಾ. ಬಿ. ಎಸ್. ಗಂಗನಹಳ್ಳಿ, ಕುಮಾರಿ ಗಂಗನಹಳ್ಳಿ, ಡಾ. ಅ. ಬ. ಇಟಗಿ, ನಿಖಿಲ್ ಮೆಣಸಿನಕಾಯಿ, ರಾಜು ಕಣ್ಣಪ್ಪನವರು, ವಿಜಯ್ ಕುಮಾರ್ ನೆರಳೇಕರ್ ಹಾಗೂ ಶಬರಿ ಹೋಟೆಲ್ ಮಾಲಕರಾದ ಜಯನಾಯರ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಅಗಲಿದ ಚೇತನಕ್ಕೆ ಆದರಾಂಜಲಿ ಅರ್ಪಿಸಿದರು.
