Belagavi

ಕ್ರೀಡಾ ಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಹಲವು ಹೊಸ ಯೋಜನೆ: ಸಂಘಟನಾ ಕಾರ್ಯದರ್ಶಿ ಪ್ರಸಾದ್ ಮಹಾನ್ಕರ್

Share

ಬೆಳಗಾವಿಯ ಶಾಸ್ತ್ರಿನಗರದ ವಿಮಲ್ ಫೌಂಡೇಶನ್ ಕಚೇರಿಯಲ್ಲಿ ಕ್ರೀಡಾ ಭಾರತಿ ಸಂಘಟನೆಯ ಪದಾಧಿಕಾರಿಗಳ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು.
ಬೆಳಗಾವಿಯ ಶಾಸ್ತ್ರಿನಗರದಲ್ಲಿರುವ ವಿಮಲ್ ಫೌಂಡೇಶನ್ ಕಾರ್ಯಾಲಯದಲ್ಲಿ ಕ್ರೀಡಾ ಭಾರತಿ ಬೆಳಗಾವಿ ಸಂಘಟನೆಯ ಪದಾಧಿಕಾರಿಗಳ ಸಭೆ ಜರುಗಿತು.

ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾರ್ಗದರ್ಶನ ನೀಡಿದ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಮಹಾನ್ಕರ್ ಅವರು, ಮುಂಬರುವ ಸೆಪ್ಟೆಂಬರ್ 6 ರಂದು ನಡೆಯಲಿರುವ ‘ಕ್ರೀಡಾಜ್ಞಾನ ಪರೀಕ್ಷೆ’ ಹಾಗೂ ‘ರಾಷ್ಟ್ರೀಯ ಕ್ರೀಡಾ ನೀತಿ’ ಕುರಿತು ಮಾಹಿತಿ ಹಂಚಿಕೊಂಡರು. ಕ್ರೀಡಾ ನೀತಿಯಲ್ಲಿನ ಶಿಕ್ಷಣ ನೀತಿ, ಟ್ಯಾಲೆಂಟ್ ಹಂಟ್ ಹಾಗೂ ಖೇಲ್ ಆಂದೋಲನದ ಅಡಿಯಲ್ಲಿ ಕ್ರೀಡಾ ಭಾರತಿ ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಕ್ರೀಡಾ ಕ್ಷೇತ್ರದ ಪ್ರಗತಿಗಾಗಿ ಹಲವು ಹೊಸ ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಇದಕ್ಕೂ ಮುನ್ನ ಪ್ರಾಂತ ಅಧ್ಯಕ್ಷ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಬಾಕ್ಸರ್ ಮುಕುಂದ್ ಕಿಲ್ಲೇಕರ್, ಲಕ್ಷ್ಮಣ್ ಪವಾರ್, ಕಿರಣ್ ಜಾಧವ್ ಸೇರಿದಂತೆ ಇತರ ಗಣ್ಯರು ಪ್ರಸಾದ್ ಮಹಾನ್ಕರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ, ಬೆಳಗಾವಿ ಜಿಲ್ಲೆಯಿಂದ ಕ್ರೀಡಾಜ್ಞಾನ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳು ಭಾಗವಹಿಸುವಂತೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬೆಳಗಾವಿ ಕ್ರೀಡಾ ಭಾರತಿ ಪದಾಧಿಕಾರಿಗಳು ಮಹಾನ್ಕರ್ ಅವರಿಗೆ ಭರವಸೆ ನೀಡಿದರು. ಸಭೆಯಲ್ಲಿ ಜುಡೋ ರಾಷ್ಟ್ರೀಯ ತರಬೇತುದಾರಿಣಿ ರೋಹಿಣಿ ಪಾಟೀಲ್ ಸೇರಿದಂತೆ ಹಲವು ಕ್ರೀಡಾ ಶಿಕ್ಷಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:

error: Content is protected !!