Uncategorized

ಬೆಳಗಾವಿಯಲ್ಲಿ ಆರ್‌ಎಸ್‌ಎಸ್ ಬೈಠಕ್‌ಗೆ ಅನುಮತಿ ನೀಡದಂತೆ ಕಮಿಷನರ್‌ಗೆ ಮನವಿ.. ನೋಂದಣಿ ಪ್ರಶ್ನಿಸಿದ ಸಾಮಾಜಿಕ ಕಾರ್ಯಕರ್ತ ಶಿವಾನಂದ ಮುತ್ತಣ್ಣವರ…

Share

ಅಧಿಕೃತವಾಗಿ ನೋಂದಣಿ ಹೊಂದಿರದ ಆರ್‌ಎಸ್ಎಸ್ ಸಂಘಟನೆಯಿಂದ ಬೆಳಗಾವಿಯಲ್ಲಿ ಜು.9 ರಿಂದ 11ರವರೆಗೆ ನಡೆಯುತ್ತಿರುವ ಬೈಠಕ್ ಗೆ ಅನುಮತಿ ನೀಡಬಾರದು ಎಂದು ಸಾಮಾಜಿಕ ಕಾರ್ಯಕರ್ತ ಶಿವಾನಂದ ಮುತ್ತಣ್ಣವರ ನಗರ ಪೊಲೀಸ್ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುತ್ತಣ್ಣವರ, ಇತ್ತೀಚೆಗೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಸಂಘಟನೆಯ ಕಾನೂನು ಬದ್ದ ನೋಂದಣಿ ಹಾಗೂ ಆರ್ಥಿಕ ಪಾರದರ್ಶಕತೆಯ ಕುರಿತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡುವಂತೆ ಕೇಳಿದ್ದರು.

ದೇಶದ ಎಲ್ಲ ಎನ್‌ಜಿಒ, ಟ್ರಸ್ಟ್‌ಗಳು ಹಾಗೂ ಸಾಮಾಜಿಕ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮತ್ತು ಹಣಕಾಸು ಸಂಬಂಧಿತ ನಿಯಮಗಳನ್ನು ಪಾಲಿಸುತ್ತಿರುವಾಗ, ಆರ್‌ಎಸ್ಎಸ್ ಮಾತ್ರ ಏಕೆ ವಿನಾಯಿತಿ ಎಂದು ಪ್ರಶ್ನಿಸಿದರು.

ಸಾವಿರಾರು ಮಂದಿ ಭಾಗವಹಿಸುವ ಬೃಹತ್ ಸಭೆಗಳು ಮತ್ತು ಮೆರವಣಿಗೆಗಳ ಸಂದರ್ಭದಲ್ಲಿ ಯಾವುದೇ ಭದ್ರತಾ ಲೋಪ ಸಂಭವಿಸಿದರೆ ಅದರ ಹೊಣೆಗಾರಿಕೆ ಯಾರ ಮೇಲಿದೆ ಹಾಗೂ ಕಾರ್ಯಕ್ರಮದ ಆಯೋಜಕರಾಗಿ ಜವಾಬ್ದಾರಿಯುತ ಕಾನೂನು ಬದ್ಧ ಘಟಕ ಯಾವುದು ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ಎಂದರು.

ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಆರ್‌ಎಸ್ಎಸ್ ತನ್ನ ಕಾನೂನುಬದ್ಧ ನೋಂದಣಿ ಹಾಗೂ ಅಗತ್ಯ ದಾಖಲೆಗಳನ್ನು ಬಹಿರಂಗಪಡಿಸುವವರೆಗೆ ಬೆಳಗಾವಿ ಜಿಲ್ಲಾಡಳಿತ ಮತ್ತು ನಗರ ಪೊಲೀಸ್ ಆಯುಕ್ತರು ಜುಲೈ 9ರಿಂದ ಆರಂಭವಾಗಲಿರುವ ಮೂರು ದಿನಗಳ ರಾಷ್ಟ್ರೀಯ ಬೈಠಕ್‌ಗೆ ಅನುಮತಿ ನೀಡಬಾರದು” ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದೇನೆ ಎಂದರು.

Tags:

error: Content is protected !!